ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU
*ಮನೆಯಿಂದ ಶಾಲೆ ಕಡೆಗೆ...* *ಉಪಜಿಲ್ಲಾ ಪ್ರವೇಶೋತ್ಸವ ಸಂಭ್ರಮದ ಗಳಿಗೆ* ಮೀಯಪದವು: ಮಂಜೇಶ್ವರ ಉಪಜಿಲ್ಲಾ ಮಟ್ಟದ ಮಕ್ಕಳ ಶಾಲಾ ಪ್ರವೇಶೋತ್ಸವವು ಮೀಯಪದವಿನ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಬಹು ವಿಜೃಂಭಣೆಯಿಂದ ಜರಗಿತು.ಮಂಜೇಶ್ವರದ ಮಾನ್ಯ ಶಾಸಕರಾದ ಶ್ರೀ ಎ ಕೆ ಯಂ ಅಶ್ರಫ್ ಅವರು ಪ್ರವೇಶೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಹಿತೈಷಿ ಶ್ರೀ ಮೋಹನ ಶೆಟ್ಟಿ ಮಜ್ಜಾರು ಇವರು ಕೊಡುಗೆಯಾಗಿ ನೀಡಿದ ಬ್ಯಾಗುಗಳನ್ನು ಶಾಸಕರು ಮಕ್ಕಳಿಗೆ ವಿತರಿಸಿದರು. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಮಂಜೇಶ್ವರದ ಪ್ರಭಾರ ವಿದ್ಯಾಧಿಕಾರಿಗಳಾದ ಶ್ರೀ ಜಿತೇಂದ್ರ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.ಮಂಜೇಶ್ವರ ಬ್ಲೋಕ್ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಶಮೀನಾ ಟೀಚರ್,ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಜಯರಾಮ ಬಲ್ಲಂಗುಡೇಲು, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಚೆಯರ್ ಪರ್ಸನ್ ಶ್ರೀಮತಿ ಸರಸ್ವತಿ, ಅಭಿವೃದ್ಧಿ ಸ್ಥಾಯಿ ಸಮಿತಿಯ ಚೆಯರ್ ಪರ್ಸನ್ ಶ್ರೀಮತಿ ರುಕ್ಯಾ ಸಿದ್ದಿಕ್, ಕ್ಷೇಮಾಭಿವೃದ್ಧಿ ಸಮಿತಿಯ ಚೆಯರ್ ಪರ್ಸನ್ ಶ್ರೀ ಬಾಬು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ರಾಧಾಕೃಷ್ಣ ಕೆ ವಿ ಮತ್ತು ಶ್ರೀಮತಿ...
Comments
Post a Comment