ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU

*ಮನೆಯಿಂದ ಶಾಲೆ ಕಡೆಗೆ...*
*ಉಪಜಿಲ್ಲಾ ಪ್ರವೇಶೋತ್ಸವ ಸಂಭ್ರಮದ  ಗಳಿಗೆ*


ಮೀಯಪದವು: ಮಂಜೇಶ್ವರ ಉಪಜಿಲ್ಲಾ ಮಟ್ಟದ ಮಕ್ಕಳ ಶಾಲಾ ಪ್ರವೇಶೋತ್ಸವವು ಮೀಯಪದವಿನ  ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಬಹು ವಿಜೃಂಭಣೆಯಿಂದ ಜರಗಿತು.ಮಂಜೇಶ್ವರದ ಮಾನ್ಯ ಶಾಸಕರಾದ ಶ್ರೀ ಎ ಕೆ ಯಂ ಅಶ್ರಫ್ ಅವರು ಪ್ರವೇಶೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಹಿತೈಷಿ ಶ್ರೀ ಮೋಹನ ಶೆಟ್ಟಿ ಮಜ್ಜಾರು ಇವರು ಕೊಡುಗೆಯಾಗಿ ನೀಡಿದ ಬ್ಯಾಗುಗಳನ್ನು ಶಾಸಕರು ಮಕ್ಕಳಿಗೆ ವಿತರಿಸಿದರು. ಮೀಂಜ ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಮಂಜೇಶ್ವರದ ಪ್ರಭಾರ ವಿದ್ಯಾಧಿಕಾರಿಗಳಾದ ಶ್ರೀ ಜಿತೇಂದ್ರ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.ಮಂಜೇಶ್ವರ ಬ್ಲೋಕ್ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಶಮೀನಾ ಟೀಚರ್,ಮೀಂಜ‌ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ  ಜಯರಾಮ ಬಲ್ಲಂಗುಡೇಲು, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಚೆಯರ್ ಪರ್ಸನ್ ಶ್ರೀಮತಿ ಸರಸ್ವತಿ, ಅಭಿವೃದ್ಧಿ ಸ್ಥಾಯಿ ಸಮಿತಿಯ ಚೆಯರ್ ಪರ್ಸನ್  ಶ್ರೀಮತಿ ರುಕ್ಯಾ ಸಿದ್ದಿಕ್, ಕ್ಷೇಮಾಭಿವೃದ್ಧಿ ಸಮಿತಿಯ ಚೆಯರ್ ಪರ್ಸನ್ ಶ್ರೀ ಬಾಬು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ರಾಧಾಕೃಷ್ಣ ಕೆ ವಿ ಮತ್ತು  ಶ್ರೀಮತಿ ಅಶ್ವಿನಿ ಪಜ್ವ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭನುಡಿಗಳನ್ನು ನುಡಿದರು. ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಶ್ರೀ ನಾರಾಯಣ ದೇಲಂಪಾಡಿ, ಕಾಸರಗೋಡು ಕೈಟ್ ನ ಮಾಸ್ಟರ್ ಟ್ರೈನರಾದ ಶ್ರೀಮತಿ ಪ್ರಿಯ, ವಿದ್ಯಾವರ್ಧಕ ಹಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕರೂ ಕ್ಯಾಂಪ್ಕೋ ನಿರ್ದೇಶಕರೂ ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಇದರ ಅಧ್ಯಕ್ಷರೂ ಆಗಿರುವ ಶ್ರೀ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಯು‌ಪಿ‌‌ ಶಾಲೆಯ ಶಾಲಾ‌ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಧರ್ ರಾವ್ ಆರ್ ಯಂ, ಮಂಜೇಶ್ವರ‌ ಉಪಜಿಲ್ಲಾ ಯೋಜನಾಧಿಕಾರಿ ಶ್ರೀ ಜೋಯ್ ಜಿ, ವಿದ್ಯಾವರ್ಧಕ ಹೈಸ್ಕೂಲಿನ ನೂತನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೃದುಲಾ, ಶಾಲಾ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷರುಗಳಾದ ಶ್ರೀ ಹಮೀದ್ ಮೈತಲ್ ಮತ್ತು ಶ್ರೀಮತಿ ವಿಜಿಮೋಳ್, ಮಾತೃ ಮಂಡಳಿಯ ಅಧ್ಯಕ್ಷೆಯರಾದ ಶ್ರೀಮತಿ ಸ್ವಪ್ನ ಮತ್ತು ಶ್ರೀಮತಿ ಲಲಿತ ಬುಡ್ರಿಯಾ, ವಿದ್ಯಾವರ್ಧಕ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಅಧ್ಯಾಪಕರಾದ ಶ್ರೀ ದಾಮೋದರ ಮಾಸ್ತರ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಸಭಾ ಕಾರ್ಯಕ್ರಮದ ಮೊದಲು ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಕಿರೀಟವನ್ನು  ನೀಡಿ ಅವರನ್ನು ಶಾಲೆಗೆ ಆತ್ಮೀಯವಾಗಿ ಸ್ವಾಗತಿಸಿ, ಘೋಷಯಾತ್ರೆಯ ಮೂಲಕ ಶಾಲೆಗೆ ಕರೆತರಲಾಯಿತು. ಸಭಾಕಾರ್ಯಕ್ರಮದ ನಂತರ ಹೆತ್ತವರಿಗೆ ತಿಳುವಳಿಕಾ ತರಬೇತಿಯನ್ನು ಶಾಲಾ ಅಧ್ಯಾಪಕರಾದ ಶ್ರೀ ಬಾಲಕೃಷ್ಣ ಮಾಸ್ತರ್  ಅವರು ನಡೆಸಿಕೊಟ್ಟರು.  ತದನಂತರ ಮಕ್ಕಳಿಂದ ವಿವಿಧ ನೃತ್ಯ ವೈವಿಧ್ಯ  ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಹಿರಿಯ ಅಧ್ಯಾಪಕರಾದ ಶ್ರೀ ರಾಮಚಂದ್ರ ಧನ್ಯವಾದವಿತ್ತರು.ಶಾಲಾ ಅಧ್ಯಾಪಕರಾದ ಶ್ರೀ ಸುನಿಲ್ ಕುಮಾರ್ ಯಂ ಮತ್ತು ಶ್ರೀ ವಿಘ್ನೇಶ ಯಸ್ ಕಾರ್ಯಕ್ರಮವನ್ನು ನಿರೂಪಿಸಿದರು.ನಂತರ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

 






























































 

Comments

Popular posts from this blog

ಶಾಲಾ ಚುನಾವಣೆ 2023-24