Posts

Featured post

🔥💥ಮಂಜೇಶ್ವರ ಉಪಜಿಲ್ಲಾ ಕ್ರೀಡೋತ್ಸವ 2023-24 ರಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳ ಸಾಧನೆಗಳು🔥💥

Image
 

ದಿ. ಯಂ ರಾಮಕೃಷ್ಣ ರಾವ್ ಸಂಸ್ಮರಣಾ ಕಾರ್ಯಕ್ರಮ

To see the photos click the below links ದಿ. ಯಂ ರಾಮಕೃಷ್ಣ ರಾವ್ ಸಂಸ್ಮರಣಾ ಕಾರ್ಯಕ್ರಮ  

77 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ

Image
 ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ 77ನೇ ವರ್ಷದ  ಸ್ವಾತಂತ್ರೋತ್ಸವ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ಸಂಚಾಲಕಿ ರಾಜೇಶ್ವರಿ.ಎಸ್.ರಾವ್ ಧ್ವಜಾರೋಹಣ ಗೈದರು.ಸಿಹಿ ತಿಂಡಿ ವಿತರಣೆಯ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಟಿಎ ಅಧ್ಯಕ್ಷರಾದ ಹಮೀದ್ ಮೈತಾಳ್ ವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್.ರಾವ್ ಆರ್.ಎಂ ಹಾಗೂ ಶಾಲಾ ಹಿರಿಯ ಅಧ್ಯಾಪಕರಾದ ನಾರಾಯಣ.ಯು ಶುಭಕೋರಿದರು.ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ರಾಜೇಶ್ವರಿ.ಎಸ್.ರಾವ್ ಹಾಗೂ ಎಂ.ಪಿ.ಟಿ ಎ ಅಧ್ಯಕ್ಷೆ ಸ್ವಪ್ನಾ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಲ್.ಪಿ ಎಸ್. ಆರ್.ಜಿ ಕನ್ವಿನರ್ ಪ್ರತಿಭಾಶ್ರೀ.ಕೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ,ಶಾಲಾ ಸ್ಟಾಫ್ ಸೆಕ್ರೆಟರಿ ರಾಧಮಣಿ.ಬಿ ವಂದಿಸಿದರು.ಶಾಲಾ ಯು.ಪಿ ಎಸ್.ಆರ್.ಜಿ ಕನ್ವಿನರ್ ರಜನಿ.ಸಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

*ಕಿರಿಯ ಪ್ರಾಥಮಿಕ ಮಟ್ಟದ ಬಾಲಸಭೆ ಉದ್ಘಾಟನೆ*

Image
ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಕಿರಿಯ ಪ್ರಾಥಮಿಕ ಮಟ್ಟದ ಬಾಲಸಭೆಯ ಉದ್ಘಾಟನಾ ಕಾರ್ಯಕ್ರಮ ಶ್ರೀ ಯಂ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅರವಿಂದಾಕ್ಷ ಭಂಡಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.ಕಾರ್ಯಕ್ರಮಕ್ಕೆ ಶಾಲಾ ಹಿರಿಯ ಅಧ್ಯಾಪಕರಾದ ನಾರಾಯಣ.ಯು,ಹಿರಿಯ ಅಧ್ಯಾಪಿಕೆ ಪದ್ಮಾವತಿ.ಎಂ, ಯು.ಪಿ ಎಸ್.ಆರ್.ಜಿ ಕನ್ವಿನರ್ ರಜನಿ.ಸಿ.ಕೆ ಹಾಗೂ ಎಲ್.ಪಿ ಎಸ್.ಆರ್.ಜಿ ಕನ್ವಿನರ್ ಪ್ರತಿಭಾಶ್ರೀ.ಕೆ ಶುಭ ಹಾರೈಸಿದರು. ಸಭಾ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ಸುಚಿತ್ರ ಸ್ವಾಗತಿಸಿ,ಗಹನ್ ವಂದಿಸಿದರು.ವಿದ್ಯಾರ್ಥಿನಿಗಳಾದ ಸಿಝ್ಮಾ ,ವೀಕ್ಷಾ ಹಾಗೂ ಹರ್ಪಿತಾ ನಿರೂಪಿಸಿದರು. ನಂತರ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು.ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಭಿರಾಮ್,ರಿಷಿಕ್ ಶೆಟ್ಟಿ, ಕದೀಜತ್ ಅಫ್ನಾ, ಹಿಬ ಫಾತಿಮ,ದೈವಿಕ್ ಯಲ್ ಎನ್ ನಿರೂಪಿಸಿದರು.

Moon Day Celebration🌖🚀

Image
  Moon Day was celebrated in our school On 21-07-2023 Friday .Our school HM Aravindaksha Bhandary inaugurated the programme.Our school science teacher Vinayakrishna Gave information about Moon day and also showed the video of Chandrayana 3.🌔🚀

📘📚ವಾಚನಾ ಮಾಸಾಚರಣೆಯ ಸಮಾರೋಪ ಸಮಾರಂಭ📘📚

Image
 ನಮ್ಮ ಶಾಲೆಯಲ್ಲಿ ದಿನಾಂಕ 19.07.2023 ನೇ ಬುಧವಾರ ವಾಚನಾ ಮಾಸಾಚರಣೆಯ ಸಮಾರೋಪ ಸಮಾರಂಭ ಶಾಲಾ ಸಭಾಭವನದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಎಸ್.ವಿ.ವಿ ಎಚ್.ಎಸ್.ಎಸ್ ಶಾಲಾ ಕನ್ನಡ ಪ್ರಾಧ್ಯಾಪಿಕೆ ಸಾವಿತ್ರಿ ಟೀಚರ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ,ಶಾಲಾ ಗ್ರಂಥಾಲಯದ ಸಂಚಾಲಕರಾದ ಸುನಿಲ್ ಕುಮಾರ್ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಮಕ್ಕಳು ಬರೆದ ಸೃಜನಾತ್ಮಕ ಪುಸ್ತಕ 'ಅರಳು ಮಲ್ಲಿಗೆ'ಯನ್ನು ಬಿಡುಗಡೆಗೊಳಿಸಲಾಯಿತು.ನಂತರ ವಾಚನಾ ಮಾಸಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕ ಅಶೋಕ್ ಕುಮಾರ್. ಡಿ ಸ್ವಾಗತಿಸಿ,ನಿರೂಪಿಸಿದರು.ಅಧ್ಯಾಪಕ ಸುನಿಲ್ ಕುಮಾರ್ ವಂದಿಸಿದರು.