ಶಾಲಾ ವಾರ್ಷಿಕೋತ್ಸವ

ನಮ್ಮ ಶಾಲಾ ವಾರ್ಷಿಕೋತ್ಸವವು ತಾರೀಕು 30-01-2015 ರಂದು ನಡೆಯಿತು. ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮವು  ಸರಿಯಾಗಿ ಅಪರಾಹ್ನ ೨.೦೦ ಗಂಟೆಗೆ ಪ್ರಾರಂಭಗೊಂಡವು. ಸಂಜೆ 4.00 ಗಂಟೆಗೆ ಸಭಾ ಕಾರ್ಯಕ್ರಮವು ಮಂಜೇಶ್ವರ ಉಪಜಿಲ್ಲಾ ಎ.ಇ .ಒ, ಶ್ರೀ ನಂದಿಕೆಶನ್  ಅವರ ಅದ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಪ್ರಶಸ್ತಿ ವಿಜೇತ ನಿವೃತ ಮುಖ್ಯೊಪಾಧ್ಯಾಯರಾದ ಶ್ರೀ ಶಂಕರ್ ಕಾಮತ್ ಅವರು ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಮಂಜೇಶ್ವರ ಬಿ.ಪಿ.ಓ ಶ್ರೀ ವಿಜಯಕುಮಾರ್ , ಶಾಲಾ ಸಂಚಾಲಕಿ ಶ್ರೀಮತಿ ರಾಜೇಶ್ವರಿ ಎಸ್ .ರಾವ್,ಪಿ.ಟಿ.ಎ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ,ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಗೀತಾ ,ಶಾಲಾ ಆಡಳಿತ ಸಲಹೆಗಾರರು ಹಾಗೂ ನಿವೃತ ಮುಖ್ಯೊಪಾಧ್ಯಾಯರಾದ ಶ್ರೀಧರ್ ರಾವ್ ,ನಿವೃತ ಎ.ಇ.ಒ ನಾರಾಯಣ್ ರಾವ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. 

Comments