ಶಾಲಾ ಪ್ರವೇಶೋತ್ಸವ

ನಮ್ಮ ಶಾಲೆಯ 2015-2016ರ ಶೈಕ್ಷಣಿಕ  ವರ್ಷದ ಪ್ರವೇಶೋತ್ಸವವು ಜೂನ್ 1 ರಂದು ಬಹಳ  ವಿಜ್ರಂಬಣೆ ಯಿಂದ ಜರಗಿತು. ಶಾಲಾ ವಿದ್ಯಾರ್ಥಿಗಳ ಮೆರವಣಿಗೆ ವಾದ್ಯ,ಚೆಂಡೆ ಗಳ ನಾದ,ಘೋಷಣೆಗಳೊಂದಿಗೆ ಮುಗಿಲು ಮುಟ್ಟುವಂತಿತ್ತು. ನಂತರ ಶಾಲಾ ಪ್ರವೇಶೋತ್ಸವ ದ  ಸಭೆ  ನಡೆಯಿತು . ಶಾಲಾ ಆಡಳಿತ  ಸಲಹೆಗಾರರಾದ ಶ್ರೀಯುತ ಶ್ರೀಧರ್ ರಾವ್  ದೀಪ  ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಶ್ರೀಮತಿ ಜುಲೇಖ ಅಬ್ದುಲ್ಲ ವಹಿಸಿದ್ದರು. ವೇದಿಕೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ,ಉಪಾಧ್ಯಕ್ಷರಾದ ಹೊನ್ನಕಟ್ಟೆ ಇಬ್ರಾಹಿಂ,ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಗೀತಾ ಮತ್ತು staff  secretory ನಳಿನಿ ಟೀಚರ್ ಉಪಸ್ತಿತರಿದ್ದರು. ಪ್ರವೇಶೋತ್ಸವ ಗೀತೆಯನ್ನು ಶ್ರೀ ರಘುವೀರ್ ಹಾಡಿದರು. L.K.G ,U.K.G ಮತ್ತು ೧ನೇ ತರಗತಿಗೆ ಶಾಲೆಯಿಂದ  ಉಚಿತ ಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಯುನಿಫಾರ್ಮ್ ಬಟ್ಟೆ ನೀಡಲಾಯಿತು. ಶ್ರೀ ದಾಮೋದರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.ಶ್ರೀ ಜಯರಾಮ್ . ಡಿ ಸ್ವಾಗತಿಸಿ,ಶ್ರೀ ನಾರಾಯಣ ಮಾಸ್ಟರ್ ವಂದಿಸಿದರು.  









Comments