ಶಾಲಾ ಚುನಾವಣೆ 2015-16

ನಮ್ಮ ಶಾಲೆಯ ಶೈಕ್ಷಣಿಕ ವರ್ಷದ ಶಾಲಾ ನಾಯಕನ ಚುನಾವಣೆಯು ತಾರೀಕು 04-08-2015 ನೇ ಮಂಗಳವಾರ ಮಧ್ಯಾಹ್ನ 2.00 ಗೆ ಶಾಲಾ ಸಭಾಂಗಣದಲ್ಲಿ ಜರಗಿತು. ಮುದ್ರೆ ಒತ್ತಿದ ಕಾಗದವನ್ನು ವಿದ್ಯಾರ್ಥಿಗಳು ಪ್ರತ್ಯೇಕವಾದ ಪೆಟ್ಟಿಗೆಯೊಳಗೆ ಹಾಕುವುದರ ಮೂಲಕ ಮತದಾನ ನಡೆಸಿದರು. ಹಾಗೆಯೇ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯ ಕುರಿತು ತಿಳಿದುಕೊಂಡರು. 7ನೇ ತರಗತಿಯ 5 ಮಂದಿ ಹುಡುಗರು ಹಾಗೂ 5 ಮಂದಿ ಹುಡುಗಿಯರು ಶಾಲಾ ನಾಯಕನ ಸ್ಥಾನಕ್ಕೆ ಸ್ಪರ್ದ್ಧಿಸಿದ್ದರು. ಶಾಲಾ ನಾಯಕನಾಗಿ ಮಿಥುನ್ ಆಯ್ಕೆಯಾದನು. ಶಾಲೆಯ ಅಧ್ಯಾಪಕರಾದ ಶ್ರೀ ಅರವಿಂದಾಕ್ಷ ಭಂಡಾರಿ ಹಾಗೂ ಶ್ರೀ ಶಿವ ಸುಬ್ರಹ್ಮಣ್ಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಚುನಾವಣೆಯು ಯಶಸ್ವಿಯಾಗಿ ಜರಗಿತು.






Comments