ವಿವಿಧ ಕ್ಲಬ್ ಗಳ ಉದ್ಘಾಟನೆ

ನಮ್ಮ ಶಾಲೆಯಲ್ಲಿ ತಾರೀಕು 27-06-2016 ರಂದು ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ವಿವಿಧ ಕ್ಲಬ್ ಗಳನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಶಾಲಾ ಸ್ಟಾಫ್ ಸೆಕ್ರೆಟಾರಿ ನಾರಾಯಣ .ಯು ಹಾಗೂ ವಿವಿಧ ಕ್ಲಬ್ ಗಳ ಕನ್ವಿನರ್ ಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಹಿರಿಯ ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ಇವರು ಮಕ್ಕಳಿಗೆ ಕ್ಲಬ್ ಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ವಿವಿಧ ಕ್ಲಬ್ ಗಳ ವತಿಯಿಯಿಂದ ಹಲವು ಕಾರ್ಯಕ್ರಮಗಳು ಜರಗಿದವು.ಕಾರ್ಯಕ್ರಮವನ್ನು ರಜನಿ ಟೀಚರ್ ಸ್ವಾಗತಿಸಿ, ರೇವತಿ ಟೀಚರ್ ವಂದಿಸಿದರು.ಕಾರ್ಯಕ್ರಮವನ್ನು ಮಹಾಬಲೇಶ್ವರ ಭಟ್ ನಿರೂಪಿಸಿದರು. 








Comments