ಶಾಲಾ ಪ್ರವೇಶೋತ್ಸವ

2016-17ನೇ ಶೈಕ್ಷಣಿಕ ಪ್ರವೆಶೋತ್ಸವವು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡಿತು. ಮೆರವಣಿಗೆ ನೇತೃತ್ವವನ್ನು ಮಿಂಜ ವಾರ್ಡ್ ಸದಸ್ಯರಾದ ವಹೀದ್ ಕೂಡೆಲ್ ವಹಿಸಿದ್ದರು. ಚೆಂಡೆ,ಚಕ್ರತಾಳ ಮಕ್ಕಳ ಘೋಷಣ ವಾಕ್ಯಗಳೊಂದಿಗೆ ಮೆರವಣಿಗೆಯ ರಂಗನ್ನು ಹೆಚ್ಚಿಸಿತು. ನಂತರ ನಡೆದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹೀದ್ ಕೂಡೆಲ್ ವಹಿಸಿದ್ದರು. ಸಭೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಜನಾರ್ಧನ್,ಎಂ.ಪಿ.ಟಿ.ಎ ಅಧ್ಯಕ್ಷೆ ಲಲಿತ ,ಶಾಲಾ ಸಂಚಾಲಕಿ ರಾಜೇಶ್ವರಿ ಎಸ್. ರಾವ್ ,ಆಡಳಿತ ಸಲಹೆಗಾರರಾದ ಶ್ರೀಧರ ರಾವ್, ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ L.K.G,U.K.G ಹಾಗು 1ನೇ ತರಗತಿ ಪುಟಾಣಿಗಳಿಗೆ ಉಚಿತ ಕಲಿಕಾ ಸಲಕರಣೆಗಳನ್ನು ನೀಡಲಾಯಿತು. ಸಭಾಕಾರ್ಯಕ್ರಮವನ್ನು ಬಾಲಕೃಷ್ಣ ಮಾಸ್ತರ್ ನಿರೂಪಿಸಿದರು. ಸುಧಾಕರ.ವಿ ಸ್ವಾಗತಿಸಿ, ಮಹಾಭಲೇಶ್ವರ ಭಟ್ ವಂದಿಸಿದರು. ನಂತರ ಶಾಲಾ ಪುಟಾಣಿಗಳಿಂದ ನೃತ್ಯ ವೈವಿದ್ಯ ನಡೆಯಿತು. 











Comments