ಶಾಲಾ ಚುನಾವಣೆ (SCHOOL ELECTION) 2016-17
ಈ ಶೈಕ್ಷಣಿಕ ವರ್ಷ 2016-17 ರ ಶಾಲಾ ನಾಯಕನ/ನಾಯಕಿಯ ಚುನಾವಣೆಯು ತಾರೀಕು 15-07-2016 ನೇ ಶುಕ್ರವಾರ ಮಧ್ಯಾಹ್ನ 2.00 ಗೆ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಿತು. ಮುದ್ರೆ ಒತ್ತಿದ
ಕಾಗದವನ್ನು ವಿದ್ಯಾರ್ಥಿಗಳು ಮತ ಪೆಟ್ಟಿಗೆಯೊಳಗೆ (ballot box ) ಹಾಕುವುದರ ಮೂಲಕ ಮತದಾನ
ನಡೆಸಿದರು. ಒಟ್ಟು 393 ವಿದ್ಯಾರ್ಥಿಗಳು ಮತದಾನ ಗೈದರು.ಹಾಗೆಯೇ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯ ಕುರಿತು ತಿಳಿದುಕೊಂಡರು. 7ನೇ
ತರಗತಿಯ 5 ಮಂದಿ ಹುಡುಗರು ಹಾಗೂ 6 ಮಂದಿ ಹುಡುಗಿಯರು ಶಾಲಾ ನಾಯಕನ/ನಾಯಕಿಯ ಸ್ಥಾನಕ್ಕೆ
ಸ್ಪರ್ದ್ಧಿಸಿದ್ದರು. ಶಾಲಾ ನಾಯಕನಾಗಿ ಅಹ್ಮದ್ ಬಾಸಿಲ್ ಆಯ್ಕೆಯಾದನು. ಶಾಲೆಯ ಅಧ್ಯಾಪಕರಾದ ಶ್ರೀ
ಅರವಿಂದಾಕ್ಷ ಭಂಡಾರಿ ಹಾಗೂ ಶ್ರೀ ಶಿವ ಸುಬ್ರಹ್ಮಣ್ಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ
ಚುನಾವಣೆಯು ಯಶಸ್ವಿಯಾಗಿ ಜರಗಿತು.ಮುಖ್ಯೋಪಾಧ್ಯಾರಾದ ಸುಧಾಕರ.ವಿ ಉಪಸ್ಥಿತರಿದ್ದರು.
ಮಕ್ಕಳು ಸಾಲಾಗಿ ಮತ ಹಾಕಲು ಬರುತ್ತಿರುವುದು.
ವಿದ್ಯಾರ್ಥಿಗಳು ಮತ ಪೆಟ್ಟಿಗೆಗೆ ಮುದ್ರೆ ಒತ್ತಿದ ಕಾಗದವನ್ನು ಹಾಕುತ್ತಿರುವುದು.
ವಿದ್ಯಾರ್ಥಿಗಳು ಮತ ಪೆಟ್ಟಿಗೆಗೆ ಮುದ್ರೆ ಒತ್ತಿದ ಕಾಗದವನ್ನು ಹಾಕುತ್ತಿರುವುದು.
ಸ್ಪರ್ದಿಸಿದ 11 ಅಭ್ಯರ್ಥಿಗಳು
Comments
Post a Comment