ವಿಜ್ಞಾನೋತ್ಸವ ಹಾಗೂ ಗಣಿತೋತ್ಸವ 2016-17

ನಮ್ಮ ಶಾಲೆಯಲ್ಲಿ ತಾರೀಕು ೦೨-೦೩-೨೦೧೭ ಮತ್ತು ೦೩-೦೩-೨೦೧೭ ರಂದು   ವಿಜ್ಞಾನೋತ್ಸವ ಹಾಗೂ ಗಣಿತೋತ್ಸವ 2016-17 ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗಿತು. ಮಿಂಜ ಪಂಚಾಯತ್ ಸದಸ್ಯರಾದ ವಹೀದ್ ಕುಡೇಲ್ ಇವರು ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್.ಎಂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಥಾಮಸ್ ಡಿ.ಸೋಜಾ,ಎಂ.ಪಿ.ಟಿ.ಎ ಅಧ್ಯಕ್ಷೆ ಸ್ವಪ್ನ.ಪಿ,ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ಹರೀಶ್ ಸುಲಾಯ ಸ್ವಾಗತಿಸಿ, ಕೃಷ್ಣ ಶರ್ಮ.ಕೆ ವಂದಿಸಿದರು. ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ  ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ  ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳನ್ನೂ ,ಪ್ರಯೋಗಗಳನ್ನೂ ,ಆಕೃತಿಗಳನ್ನೂ  ಮಾಡಿಸಲಾಯಿತು.










Comments