ಹಳೆ ವಿದ್ಯಾರ್ಥಿ ಸಂಘ

ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳ ಸಭೆಯು ತಾರೀಕು ೨೭-೦೩-೨೦೧೭ ರ ಸೋಮವಾರದಂದು ಸಂಜೆ ೪.೦೦ ಗಂಟೆಗೆ ಶಾಲಾ ಸಭಾ ಭವನದಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ನಮ್ಮ ಶಾಲಾ ನಿವೃತ ಅಧ್ಯಾಪಕರಾದ ಶಿವರಾಮ ಪದಕಣ್ಣಾಯ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂಧಿಕೇಷನ್ ಆಗಮಿಸಿದ್ದರು.ಸಭೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಜಯಪ್ರಕಾಶ್ ನಾರಾಯಣ್ ತೊಟ್ಟೆತೋಡಿ,ನಾರಾಯಣ ರಾವ್,ಶ್ರೀಧರ್ ರಾವ್  ಉಪಸ್ಥಿತರಿದ್ದರು.ಶಾಲೆಯ ಮುಂದಿನ ಅಭಿವೃದ್ಧಿಯ ಒಂದು ಸಣ್ಣ ಪರಿಚಯವನ್ನು ಶಾಲಾ ಅಧ್ಯಾಪಕರಾದ ಮಹಾಬಲೇಶ್ವರ ಭಟ್ ತಿಳಿಸಿದರು. ನಂತರ ಶಾಲಾ ಹಳೆ ವಿದ್ಯಾರ್ಥಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹಳೆ ವಿದ್ಯಾರ್ಥಿಗಳ ಗೌರವಾಧ್ಯಕ್ಷರಾಗಿ ಚಂದ್ರಶೇಖರ ಪಳ್ಳತಡ್ಕ ,ಅಧ್ಯಕ್ಷರಾಗಿ ದಿನೇಶ್ ಅಮ್ಮೆನಡ್ಕ,ಕಾರ್ಯದರ್ಶಿಯಾಗಿ ದಾಮೋಧರ ಮಾಸ್ಟರ್ ಮತ್ತು ಖಜಾಂಜಿಯಾಗಿ ಲಿಂಗಪ್ಪ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಸ್ವಾಗತಿಸಿ,ನಾರಾಯಣ.ಯು ವಂದಿಸಿದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ಹರೀಶ್ ಸುಲಾಯ ನಿರೂಪಿಸಿದರು.





Comments