ರಕ್ಷಕರ ತರಬೇತಿ ಶಿಬಿರ ಹಾಗೂ ACADEMIC MASTER PLAN SEMINAR
ನಮ್ಮ ಶಾಲೆಯಲ್ಲಿ ರಕ್ಷಕರ ತರಬೇತಿ ಶಿಬಿರ ಹಾಗೂ ACADEMIC MASTER PLAN SEMINAR ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಂಜಾ ಪಂಚಾಯತಿನ ಅಧ್ಯಕ್ಷೆ ಸಂಶಾದ್ ಶುಕೂರ್ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಿಂಜಾ ಪಂಚಾಯತ್ ಸದಸ್ಯರಾದ ವಹೀದ್ ಕೂಡೆಲ್,ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್. ಆರ್ .ಎಂ ,ಜಲನಿಧಿ ಯೋಜನೆಯ ಅಧ್ಯಕ್ಷರಾದ ಡಾI ಜಯನಿಷ್ ,ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಿನೇಶ್ ಅಮ್ಮೆನಡ್ಕ ,ಶಾಲಾ ಪಿ.ಟಿ.ಎ ಅಧ್ಯಕ್ಷರಾದ ತಿಮ್ಮಪ್ಪ ಭಟ್,ಎಂ.ಪಿ.ಟಿ.ಎ ಅಧ್ಯಕ್ಷೆ ಝೀನತ್,ಶಾಲಾ ನಿವೃತ ಅಧ್ಯಾಪಕರಾದ ದಾಮೋದರ ಮೂಲ್ಯ,ಮಿಂಜಾ ಯೂಥ್ ಕೊರ್ಡಿನೇಟರ್ ಇಬ್ರಾಹಿಂ ಹೊನ್ನಕಟ್ಟೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ,ವಿ ಉಪಸ್ಥಿತರಿದ್ದರು.ನಮ್ಮ ಶಾಲೆಯ 3 ವರ್ಷಗಳ ಮಾಸ್ಟರ್ ಪ್ಲಾನ್ ವರದಿಯನ್ನು ನಮ್ಮ ಶಾಲಾ ಹಿರಿಯ ಅಧ್ಯಾಪಕರಾದ ನಾರಾಯಣ.ಯು ಇವರು ಮಂಡಿಸಿದರು.ಇದೇ ಸಂದರ್ಭದಲ್ಲಿ ಮಿಂಜಾ ಪಂಚಾಯತಿನ ಸಹಭಾಗಿತ್ವದಲ್ಲಿ ಜಲನಿಧಿ ಯೋಜನೆಯ ಅಂಗವಾಗಿ ನೂತನವಾಗಿ ನಿರ್ಮಿಸಿದಂತಹ ಶೌಚಾಲಯದ ಉದ್ಘಾಟನೆ ಕಾರ್ಯಕ್ರಮ ಕೂಡ ನೆರವೇರಿತು. ನಂತರ ರಕ್ಷಕರಿಗೆ ವಿಶೇಷ ತರಬೇತಿ ಶಿಬಿರವನ್ನು ನಮ್ಮ ಶಾಲಾ ಅಧ್ಯಾಪಕರಾದ ಬಾಲಕೃಷ್ಣ.ಎಂ ಇವರು ನೀಡಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ಇವರು ಸ್ವಾಗತಿಸಿ,ಅಧ್ಯಾಪಕಿ ನಳಿನಿ ಟೀಚರ್ ವಂದಿಸಿದರು. ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ರಘುವೀರ್ ರಾವ್ ನಿರೂಪಿಸಿದರು.
Comments
Post a Comment