ಯೋಗ ದಿನಾಚರಣೆ

ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ಗುರುಗಳಾದ ಸೀತಾರಾಮ್ ಭಟ್ ಮೌವರ್ ಇವರು ಕಾರ್ಯಕ್ರಮವನ್ನು  ಔಪಚಾರಿಕವಾಗಿ ಉದ್ಘಾಟಿಸಿ ಯೋಗದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ನಡೆಸಿದರು .ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಲಹೆಗಾರರದ ಶ್ರೀಧರ್ ರಾವ್ ಆರ್.ಎಂ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಎಸ್,ಎಸ್ ಪ್ರಸಾದ್ ಸ್ವಾಗತಿಸಿ,ನಿರೂಪಿಸಿದರು.ಶಾಲಾ ಅಧ್ಯಾಪಕರಾದ ಮಹಾಭಲೇಶ್ವರ ಭಟ್ ವಂದಿಸಿದರು.








Comments