ದಿ l ಯಂ ರಾಮಕೃಷ್ಣ ರಾವ್ ಸಂಸ್ಮರಣೆ

ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಶಾಲಾ ಸಂಚಾಲಕರಾದ ದಿ. ಯಂ ರಾಮಕೃಷ್ಣರಾವ್ ಸಂಸ್ಮರಣೆ ಮತ್ತು ಸನ್ಮಾನ  ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ದಿನೇಶ.ವಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ ಬಿ.ಎಂ.ಎಸ್ ಕಾಸರಗೋಡಿನ ಶಿಕ್ಷಕರಾದ ಮಾಧವ ಹೇರಳ,ಮಂಜೇಶ್ವರ ಉಪಜಿಲ್ಲಾ ಬಿ.ಪಿ.ಓ ವಿಜಯ ಕುಮಾರ್ ಆಗಮಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ರಾಜೇಶ್ವರಿ.ಎಸ್.ರಾವ್ ಪಿಟಿಎ ಅಧ್ಯಕ್ಷರಾದ ತಿಮ್ಮಪ್ಪ ಭಟ್ ಹಾಗೂ ಎಂ.ಪಿ.ಟಿ.ಎ ಅಧ್ಯಕ್ಷೆ ಸೌಮ್ಯ ಪ್ರಕಾಶ್ ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಶಾಲಾ ಹಳೆವಿದ್ಯಾರ್ಥಿ ಶ್ರೀ ಬಾಬು ಶೆಟ್ಟಿ ನಾರವಿ ಇವರನ್ನು ಸನ್ಮಾನಿಸಲಾಯಿತು.ನಂತರ ಶಾಲಾ ಹಳೆ ವಿದ್ಯಾರ್ಥಿನಿಯರಾದ ಡಾ.ಆದಿಶ್ರೀ ಭಟ್ ಹಾಗೂ ನಿಶಾ .ಕೆ.ಆರ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್.ಎಂ ಸ್ವಾಗತಿಸಿ,ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ವಂದಿಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ನಿರೂಪಿಸಿದರು.
ನಂತರ ಅಧ್ಯಾಪಕರಾದ ನಾರಾಯಣ ನಾವಡ ಇವರ ನಿರ್ದೇಶನದಲ್ಲಿ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ ಅತಿಕಾಯ ಮೋಕ್ಷ ಎಂಬ  ಯಕ್ಷಗಾನ ತಾಳಮದ್ದಳೆ ಜರಗಿತು.ತದನಂತರ ಶಾಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ಗಾನ ಸುಧಾ ಕರೋಕೆ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.















Comments