ವಾಚನ ಸಪ್ತಾಹದ ಸಮಾರೋಪ ಸಮಾರಂಭ

ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ವಾಚನ ಸಪ್ತಾಹದ ಸಮಾರೋಪ ಸಮಾರಂಭ ಶಾಲಾ ರಾಮಕೃಷ್ಣರಾವ್ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ವಹಿಸಿದ್ದರು.ಕಾರ್ಯಕ್ರಮಕ್ಕೆ ಅತಿಥಿಯಾಗಿ ಜಿ. ಎಲ್.ಪಿ.ಎಸ್ ಮಜಿಬೈಲ್ ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಬಂಗೇರ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕರಾದ ನಾರಾಯಣ.ಯು,ಶಾಲಾ ಸ್ಟಾಫ್ ಸೆಕ್ರೆಟರಿ ರತ್ನಾವತಿ ಟೀಚರ್ ಹಾಗೂ ಶಾಲಾ ಅಧ್ಯಾಪಕಿ ನಳಿನಿ ಟೀಚರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಾಚನ ವಾರದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು.ಶಾಲಾ ಅಧ್ಯಾಪಕ ಸುನೀಲ್ ಕುಮಾರ್ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಿಕೆ ರಾಧಮಣಿ ಸ್ವಾಗತಿಸಿ,ಶಾಲಾ ಅಧ್ಯಾಪಕರಾದ ಅಶೋಕ್ ಕುಮಾರ್.ಡಿ ವಂದಿಸಿದರು.ಕಾರ್ಯಕ್ರಮವನ್ನು ಅಧ್ಯಾಪಕರಾದ ಮಹಾಬಲೇಶ್ವರ ಭಟ್ ನಿರೂಪಿಸಿದರು.










Comments