ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ

ವಿದ್ಯಾವರ್ಧಕ ಎ. ಯು.ಪಿ. ಶಾಲೆ ಮೀಯಪದವಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್  ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮಕ್ಕೆ ಮಿಂಜಾ ಗ್ರಾಮ ಪಂಚಾಯತ್ ಆರೋಗ್ಯ ಕೇಂದ್ರದ  ವೈದ್ಯಾಧಿಕಾರಿಗಳಾದ ಡಾ! ಪ್ರಭಾಕರ್ ಶೆಟ್ಟಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಹಾನಿಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮಿಂಜಾ ಪಿ.ಎಚ್.ಸಿ ಅಧಿಕಾರಿ ಧರ್ಮೇಂದ್ರ ,ಶಾಲಾ ಆಡಳಿತ ಸಲಹೆಗರರಾದ ಶ್ರೀಧರ್ ರಾವ್ ಆರ್.ಎಂ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ,ಶಿಹಾಬುದ್ದಿನ್ ವಂದಿಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ವಿಘ್ನೇಶ್ .ಎಸ್ ನಿರೂಪಿಸಿದರು.





Comments