ದಿI ಯಂ ರಾಮಕೃಷ್ಣ ರಾವ್ ಸಂಸ್ಮರಣಾ ಕಾರ್ಯಕ್ರಮ
ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮೀಯಪದವು ಇದರ ಸಂಚಾಲಕರಾಗಿ,ಅಧ್ಯಾಪಕರಾಗಿ, ಮೀಂಜ ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ಧ್ರುವತಾರೆಯೆನಿಸಿಕೊಂಡಿರುವ ದಿ|ಯಂ ರಾಮಕೃಷ್ಣ ರಾವ್ ಅವರ ಹದಿನೈದನೆಯ ಪುಣ್ಯತಿಥಿಯ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾದ ಶ್ರೀ ದಿನೇಶ ವಿ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಶ್ರೀ ಟಿ ನಾರಾಯಣ ಭಟ್ ರಾಮಕೃಷ್ಣ ರಾವ್ ಅವರೊಂದಿಗಿನ ಅನುಭವಗಳನ್ನು ಹಂಚಿಕೊಡರು. ಕಾರ್ಯಕ್ರಮದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಶ್ರೀ ಯೋಗೀಶ್ ರಾವ್ ಟಿ ಡಿ ಚಿಗುರುಪಾದೆ ಹಾಗೂ ಶ್ರೀ ಕೃಷ್ಣ ಜಿ ಮಂಜೇಶ್ವರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಶ್ರೀಮತಿ ರಾಜೇಶ್ವರಿ ಯಸ್ ರಾವ್,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಹಾಗೂ ಮಾತೃಮಂಡಳಿ ಅಧ್ಯಕ್ಷೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರೇಕ್ಷ ಹಾಗೂ ಯಂ ಸ್ವಸ್ತಿಕ್ ಅವರಿಗೆ ದತ್ತಿನಿಧಿಯನ್ನು ನೀಡಲಾಯಿತು.2019-20ರ ಸಾಲಿನ ಎಲ್ ಯಸ್ ಯಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಧರ್ ರಾವ್ ಆರ್ ಯಂ ಅವರು ಪ್ರಾಸ್ತಾವಿಕ ಭಾಷಣ ಹಾಗೂ ಸ್ವಾಗತವನ್ನು ನೀಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುಧಾಕರ ವಿ ಧನ್ಯವಾದವಿತ್ತರು.ಶಾಲಾ ಅಧ್ಯಾಪಕರಾದ ಶ್ರೀ ಸುನಿಲ್ ಕುಮಾರ್ ಯಂ ಕಾರ್ಯಕ್ರಮ ನಿರೂಪಿಸಿದರು.
Comments
Post a Comment