ಶಾಲಾ ಪ್ರವೇಶೋತ್ಸವ 2022-23
ವಿದ್ಯಾವರ್ಧಕ ಎ. ಯು ಪಿ ಶಾಲೆ ಮೀಯಪದವು ಇದರ 2022-23 ನೇ ಶಾಲಾ ಪ್ರವೇಶೋತ್ಸವವು ದಿ. ಯಂ ರಾಮಕೃಷ್ಣರಾವ್ ವೇದಿಕೆಯಲ್ಲಿ ಸಡಗರದಿಂದ ಜರಗಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕೃಷ್ಣಪ್ರಸಾದ್ ವಹಿಸಿದ್ದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಮಲಾಕ್ಷಿ, ಬ್ಲಾಕ್ ಪಂಚಾಯತ್ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್,ಮೀಂಜ ವಾರ್ಡ್ ಸದಸ್ಯೆ ರುಕಿಯ ಸಿದ್ದಿಕ್ ಉಪಸ್ಥಿತರಿದ್ದು ಪುಟಾಣಿಗಳಿಗೆ ಶುಭ ಕೋರಿದರು.ಸಭೆಯಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ,ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್.ಶೆಟ್ಟಿ ಪಳ್ಳತ್ತಡ್ಕ,ಕಾರ್ಯದರ್ಶಿ ದಾಮೋದರ್ ಮಾಸ್ಟರ್, ಮಾತೃ ಮಂಡಳಿ ಅಧ್ಯಕ್ಷೆ ಸ್ವಪ್ನಾ,ಬಿ.ಆರ್.ಸಿ ಸಂಪನ್ಮೂಲ ವ್ಯಕ್ತಿ ಮೋಹಿನಿ ಶುಭಹಾರೈಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ,ಹೇಮಮಾಲಿನಿ ಟೀಚರ್ ವಂದಿಸಿದರು.ಶಾಲಾ ಅಧ್ಯಾಪಕ ವಿಘ್ನೇಶ್. ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುಟಾಣಿ ಮಕ್ಕಳಿಂದ ವಿನೋದಾವಳಿಗಳು ಪ್ರದರ್ಶಿಸಲ್ಪಟ್ಟವು.ಅಧ್ಯಾಪಕರ ಚೆಂಡೆವಾದನದೊಂದಿಗೆ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದ್ದು ಗಮನಾರ್ಹವೆನಿಸಿತು
Comments
Post a Comment