ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿನಲ್ಲಿ ಅಂತಾರಾಷ್ಟ್ರೀಯ ಯೋಗಾಭ್ಯಾಸ ಕಾರ್ಯಕ್ರಮ ಯಂ.ರಾಮಕೃಷ್ಣರಾವ್ ಸಭಾಂಗಣದಲ್ಲಿ ಜರಗಿತು.ಶಾಲಾ ಅಧ್ಯಾಪಕರಾದ ವಿನಯಕೃಷ್ಣ.ಎಸ್ ಇವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಹೇಳಿಕೊಟ್ಟು ಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿಯನ್ನು ಮೂಡಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ,ಶಾಲಾ ದೈಹಿಕ ಶಿಕ್ಷಕರಾದ ಎಸ್.ಎಸ್.ಪ್ರಸಾದ್ ಹಾಗೂ ಶಾಲಾ ಅಧ್ಯಾಪಕ ,ಅಧ್ಯಾಪಿಕೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Comments
Post a Comment