ಸಂಚಾಲಕ ದಿ.ರಾಮಕೃಷ್ಣ ರಾವ್ ಸಂಸ್ಮರಣಾ ಕಾರ್ಯಕ್ರಮ
ತಾರೀಕು ೨೫-೦೯-೨೦೧೪ ರಂದು ನಮ್ಮ ಶಾಲೆಯಲ್ಲಿ ಸಂಚಾಲಕ ದಿ.ರಾಮಕೃಷ್ಣ ರಾವ್ ಸಂಸ್ಮರಣಾ ಕಾರ್ಯಕ್ರಮ ಜರಗಿತು.ಶ್ರೀ.ಇಬ್ರಾಹಿಂ ಮುಖ್ಯೋಪಾಧ್ಯಾಯರು G.H.S MOODAMBAILU. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.ಮುಖ್ಯ ಅತಿಥಿಯಾಗಿ ಶ್ರೀ ರಾಜಾರಾಮ್ ಭಟ್ ಸಂಚಾಲಕರು ಶಾರದಾ ಗಣಪತಿ ಶಾಲೆ ಪುಣ್ಯಕೋಟಿ ಇವರು ಆಗಮಿಸಿದ್ದರು.ಹಳೆ ವಿದ್ಯಾರ್ಥಿಯಾದ ಶ್ರೀ ಗಣೇಶ್ ಎಚ್.ಕೆ MD(MED),DM(ENDOCRINOLOGY)ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಕೆ.ಎಚ್ ಅಬ್ದುಲ್ಲ ಅವರು ಸಂಸ್ಮರಣ ಭಾಷಣ ಗೈದರು.ಪಿ.ಟಿ.ಎ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ,ಶಾಲಾ ಸಂಚಾಲಕಿ ಶ್ರೀಮತಿ ರಾಜೇಶ್ವರಿ.ಎಸ್.ರಾವ್ ,ಎಂ.ಪಿ.ಟಿ.ಎ ಅಧ್ಯಕ್ಷೆ ಗೀತ ಭಟ್ ,ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜಯರಾಮ.ಡಿ ಉಪಸ್ಥಿತರಿದ್ದರು.ಶಾಲಾ ಆಡಳಿತ ಸಲಹೆಗಾರರಾದ ಶ್ರೀ ಶ್ರೀದರ್ ರಾವ್ ಇವರು ಅತಿಥಿಗಳನ್ನು ಸ್ವಾಗತಿಸಿದರು.ಶಾಲಾ ಅಧ್ಯಾಪಕರಾದ ಬಾಲಕೃಷ್ಣ .ಎಮ್ ನಿರೂಪಣೆ ಗೈದರು.ನಂತರ ಮಕ್ಕಳಿಂದ ನೃತ್ಯ ಹಾಗೂ ಯಕ್ಷಗಾನ ತಾಳಮದ್ದಳೆ ಜರಗಿತು..
Comments
Post a Comment