ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ನಮ್ಮ ಶಾಲಾ 2015-16ನೇ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ ಸಂಘದ ಮಹಾಸಭೆ ತಾರೀಕು 13-06-2015 ರಂದು ಜರಗಿತು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಂಧಿಕೆಶನ್ ಅವರ ಉಪಸ್ಥಿತಿಯಲ್ಲಿ ಸಭೆ ಪ್ರಾರಂಭಗೊಂಡಿತು. 2014-15 ನೇ ಸಾಲಿನ ಪಿ.ಟಿ ಎ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಶೆಟ್ಟಿ ಸಭೆಯ ಅಧ್ಯಕ್ಷರಾಗಿದ್ದರು. ವೇದಿಕೆಯಲ್ಲಿ ಶಾಲಾ ಆಡಳಿತ ಸಲಹೆಗಾರರಾದ ಶ್ರೀ ಶ್ರೀಧರ್ ರಾವ್, ಎಂ.ಪಿ.ಟಿ ಎ ಶ್ರೀಮತಿ ಗೀತಾ ಟೀಚರ್,ಶಾಲಾ ಮುಖ್ಯೋಪಾಧ್ಯಾರಾದ ಶ್ರೀ ಜಯರಾಮ್ .ಡಿ ಉಪಸ್ಥಿತರಿದ್ದರು. ನಂತರ ರಕ್ಷಕ ಶಿಕ್ಷಕ ಕಮಿಟಿ ರೂಪುಗೊಳಿಸಲಾಯಿತು .ಈ ವರ್ಷದ ಪಿ.ಟಿ ಎ ಅಧ್ಯಕ್ಷರಾಗಿ ಶ್ರೀ ಜನಾರ್ಧನ ಹಾಗೂ ಎಂ.ಪಿ.ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ಲಲಿತ ಇವರನ್ನು ಆಯ್ಕೆ ಮಾಡಲಾಯಿತು.
Comments
Post a Comment