ವಾಚನಾ ವಾರ ಉದ್ಘಾಟನೆ
ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಹಾಗೂ ಪತ್ರಕರ್ತರಾದ ಹರ್ಷದ್ ವರ್ಕಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ದಾಮೋದರ್ ಮಾಸ್ತರ್ ಕಬ್ಬಿನ ಹಿತ್ತಿಲು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ನಡೆಸಿದರು. ಸುಧಾಕರ್.ವಿ, ಎಸ್,ಆರ್.ಜಿ ಸಂಚಾಲಕ ನಾರಾಯಣ್.ಯು,ಸ್ಟಾಫ್ ಸೆಕ್ರೆಟರಿ ನಳಿನಿ ಟೀಚರ್ ಶುಭ ಹಾರೈಸಿದರು. ಉದಯವಾಣಿ,ಹೊಸದಿಗಂತ ಹಾಗೂ ವಿಜಯ ಕರ್ನಾಟಕ ದಿನ ಪತ್ರಿಕೆಗಳ ವತಿಯಿಂದ ನೀಡಲಾದ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಶಾಲಾ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಎಸ್. ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು.ಅಧ್ಯಾಪಕರಾದ ಅಶೋಕ್ ಕುಮಾರ್ ನಿರೂಪಿಸಿ, ರೇವತಿ ಟೀಚರ್ ವಂದಿಸಿದರು.
Comments
Post a Comment