ಓಣಂ ಹಬ್ಬ ಆಚರಣೆ
ನಮ್ಮ ಶಾಲೆಯಲ್ಲಿ ತಾರೀಕು 21-08-2015 ರಂದು ಓಣಂ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಯಿತು,ಬೆಳಗ್ಗೆ ಮಕ್ಕಳು ತಮ್ಮ ತಮ್ಮ ತರಗತಿಯಲ್ಲಿ ಪೂಕಳಂ ಪ್ರದರ್ಶನ ಮಾಡಿದರು.ಮದ್ಯಾಹ್ನ ಭೋಜನವನ್ನು ಮಕ್ಕಳಿಗೆ ನೀಡಲಾಯಿತು.ಬೋಜನಕ್ಕೆ ವಿಶೇಷವಾಗಿ ಪಾಯಸವನ್ನು ಮಾಡಲಾಗಿತ್ತು.ನಂತರ ಅಧ್ಯಾಪಕರಿಗೆ ಸಂಗೀತ ಕುರ್ಚಿ, ಏಳನೇ ತರಗತಿ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಮಕ್ಕಳು ಬಹಳ ಸಂತೋಷದಿಂದ ಓಣಂ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡರು.
Comments
Post a Comment