ಹಿಂದಿ ದಿನ ಆಚರಣೆ
ತಾರೀಕು 18-09-2015 ರಂದು ನಮ್ಮ ಶಾಲೆಯಲ್ಲಿ ಹಿಂದಿ ದಿನ ಆಚರಿಸಲಾಯಿತು. ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್. ಆರ್. ಎಮ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ್.ವಿ, ಹಿರಿಯ ಅಧ್ಯಾಪಕರಾದ ದಾಮೋಧರ್ ಕಬ್ಬಿನ ಹಿತ್ತಿಲು, ಹಿಂದಿ ಅಧ್ಯಾಪಕರಾದ ನಳಿನಿ ಟೀಚರ್,ರಾಮಚಂದ್ರ.ಕೆ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ತೇಜಸ್ ಕಾರ್ಯಕ್ರಮ ನಿರೂಪಿಸಿ,ಪ್ರಣಾಮ್ ಶೆಟ್ಟಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪ್ರಕೃತಿ ಮತ್ತು ಮಿಥಿಲ ನಿರೂಪಿಸಿದರು.
Comments
Post a Comment