ದಿ.ರಾಮಕೃಷ್ಣ ರಾವ್ ಸಂಸ್ಮರಣೆ

ನಮ್ಮ ಶಾಲಾ ಸಂಚಾಲಕರಾದ ದಿ.ರಾಮಕೃಷ್ಣ ರಾವ್ ಸಂಸ್ಮರಣೆ ಕಾರ್ಯಕ್ರಮ ತಾರೀಕು 25-09-2015 ರಂದು ನಮ್ಮ ಶಾಲಾ ಸಭಾಂಗಣದಲ್ಲಿ ನಡೆಯಿತು.ಮಧ್ಯಾಹ್ನ 2.00 ಘಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು.ಶಾಲಾ ಹಳೆ ವಿದ್ಯಾರ್ಥಿ ರಾಮ ಇವರು ಸಾಯಿಬಾಜ ಭಾರಿಸುವುದರ ಮೂಲಕ ಎಲ್ಲರನ್ನು ಮನರಂಜಿಸಿದರು.ಸರಿಯಾಗಿ 2.30 ಘಂಟೆಗೆ ಸಭಾಕಾರ್ಯಕ್ರಮ ಪ್ರಾರಂಭವಾಯಿತು.ಸಭೆಯ ಅಧ್ಯಕ್ಷ ಸ್ಥಾನವನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಗಳಾದ ವೇಣುಗೋಪಾಲನ್ .ಇ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಕ್ಯಾ. ಗಣೇಶ್ ಕಾರ್ಣಿಕ್ ,ಮಂಜೇಶ್ವರ ಉಪಜಿಲ್ಲಾ ವಿದ್ಯಾದಿಕಾರಿಗಳಾದ ನಂದಿಕೇಶನ್ ಆಗಮಿಸಿದ್ದರು.
ರಾಮಕೃಷ್ಣರವರ ಸಂಸ್ಮರಣಾ ಭಾಷಣವನ್ನು ಎಸ್.ವಿ.ವಿ.ಎಚ್.ಎಸ್.ಮೀಯಪದವಿನ ಅಧ್ಯಾಪಕರಾದ ರಾಜಾರಾಮ್ ರಾವ್ ಗೈದರು.ಸಭೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿಯಾದ ಗ್ರೂಪ್ ಕ್ಯಾ.ಎಸ್. ಎಂ.ಅಡ್ಯಂತಾಯ ಇವರನ್ನು ಗಣ್ಯರಿಂದ ಸನ್ಮಾನಿಸಲಾಯಿತು.ಸನ್ಮಾನ ಪತ್ರವನ್ನು ಅಧ್ಯಾಪಕರಾದ ರಾಮಚಂದ್ರ.ಕೆ.ಎಮ್ ಭೋಧಿಸಿದರು.ರಾಮಕೃಷ್ಣ ರಾವ್ ದತ್ತಿ ನಿಧಿಯ ಪ್ರಯುಕ್ತ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡಲಾಯಿತು.ಸಬೆಯಲ್ಲಿ ಶಾಲಾ ಸಂಚಾಲಕರಾದ ಶ್ರೀಮತಿ ರಾಜೇಶ್ವರಿ.ಎಸ್.ರಾವ್,ಪಿ.ಟಿ.ಎ ಅಧ್ಯಕ್ಷರಾದ ಎಸ್.ಜನಾರ್ಧನ್, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಲಲಿತ, ಶಾಲಾ ಆಡಳಿತ ಸಲಹೆಗಾರಾದ ಶ್ರೀಧರ್ ರಾವ್.ಆರ್.ಎಮ್, ಮುಖ್ಯೋಪಾಧ್ಯಾಯರಾದ ಜಯರಾಮ್.ಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಧರ್ ರಾವ್.ಆರ್.ಎಮ್ ಸ್ವಾಗತಿಸಿ,ಅಧ್ಯಾಪಕರಾದ ದಾಮೋಧರ್ ಕಬ್ಬಿನ ಹಿತ್ತಿಲು ನಿರೂಪಿಸಿ, ಜಯರಾಮ್.ಡಿ  ವಂದಿಸಿದರು.ಸಭಾಕಾರ್ಯಕ್ರಮದ ನಂತರ ನಾಟ್ಯ ನಿಲಯ ಕುಂಬಳೆ ಇದರ ನಿರ್ದೇಶಕಿ ವಿದುಷಿ ಶ್ರೀಮತಿ ವಿದ್ಯಾಲಕ್ಷ್ಮಿ ಕುಂಬಳೆ ಇವರ ಶಿಷ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU