ವಿದ್ಯಾರಂಗ ಸಾಹಿತ್ಯ ಕಮ್ಮಟ
ತಾರೀಕು 03-10-2015 ರಂದು ನಮ್ಮ ಶಾಲೆಯಲ್ಲಿ ವಿದ್ಯಾರಂಗ ಸಾಹಿತ್ಯ ಕಮ್ಮಟ ಜರಗಿತು. ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಕಮ್ಮಟದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ್.ವಿ, ವಿದ್ಯಾರಂಗ ಕನ್ವಿನರ್ ದಾಮೋದರ್ ಮೂಲ್ಯ, ಸ್ಟಾಫ್ ಸೆಕ್ರೆಟರಿ ನಳಿನಿ ಟೀಚರ್, ಯು.ಪಿ ಮತ್ತು ಎಲ್.ಪಿ ವಿಭಾಗದ ಎಸ್.ಆರ್.ಜಿ ಗಳಾದ ನಾರಾಯಣ.ಯು,ಅಶೋಕ್ ಕುಮಾರ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅನುಜ್ಞಾಲಕ್ಷ್ಮಿ ಸ್ವಾಗತಿಸಿ, ಗೀತಾಂಜಲಿ ವಂದಿಸಿ ,ಫಾಥಿಮತ್ ಆಯಿಶ ನಿರೂಪಿಸಿದಳು. ನಂತರ ಮಕ್ಕಳಲ್ಲಿ ಜಾನಪದ ಗೀತೆಗಳು,ಸಾಹಿತಿಗಳ ಫೋಟೋ ಗ್ಯಾಲರಿ,ಕೊಲೇಶ್ ನಿರ್ಮಾಣ, ಕವಿತೆ ರಚನೆ, ನ್ಯೂಸ್ ಪೇಪರ್ ತಯಾರಿ ಮುಂತಾದ ಚಟುವಟಿಕೆಗಳನ್ನು ಮಾಡಿಸಲಾಯಿತು. ಕೊನೆಗೆ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
Comments
Post a Comment