ಶಾಲಾ ವಾರ್ಷಿಕೋತ್ಸವ
ನಮ್ಮ ಶಾಲಾ ವಾರ್ಷಿಕೋತ್ಸವವು ತಾರೀಕು 29-01-2016 ರಂದು ಬಹಳ ವಿಜ್ರಂಬಣೆಯಿಂದ ಜರಗಿತು. ಬೆಳಗ್ಗೆ ಶಾಲಾ ವ್ಯವಸ್ಥಾಪಕಿ ರಾಜೇಶ್ವರಿ ಎಸ್. ರಾವ್ ಧ್ವಜಾರೋಹಣ ಮಾಡುವುದರ ಮೂಲಕ ವಾರ್ಷಿಕೋತ್ಸವವನ್ನು ಉಧ್ಘಾಟಿಸಿದರು. ನಂತರ ಮಕ್ಕಳಿಗೆ ಸಿಹಿತಿಂಡಿಗಳನ್ನು ನೀಡಲಾಯಿತು. ಮದ್ಯಾಹ್ನ 2.00 ಗಂಟೆಗೆ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಪ್ರಾರಂಭಗೊಂಡವು .ಸಂಜೆ 4.00 ಗಂಟೆಗೆ ಸಭಾ ಕಾರ್ಯಕ್ರಮ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂಧಿಕೆಶನ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಧುಸೂದನ ಕುಶೆ ಶಾಲಾ ಪ್ರಾಂಶುಪಾಲರಾದ ಕೆ.ಕೆ ಉಪಾಧ್ಯಾಯ ಆಗಮಿಸಿದ್ದರು.ವೇದಿಕೆಯಲ್ಲಿ ಶಾಲಾ ವ್ಯವಸ್ಥಾಪಕಿ ಶ್ರೀಮತಿ ರಾಜೇಶ್ವರಿ ಎಸ್. ರಾವ್, ಶಾಲಾ ಆಡಳಿತ ಸಲಹೆಗಾರಾದ ಶ್ರೀ. ಶ್ರೀಧರ್ ರಾವ್ .ಆರ್.ಎಮ್ , ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ್. ಡಿ,ಪಿ.ಟಿ.ಎ ಅಧ್ಯಕ್ಷರಾದ ಎಸ್ ಜನಾರ್ಧನ್,ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಲಲಿತ ಉಪಸ್ಥಿತರಿದ್ದರು.ನಂತರ ವಿನೋದಾವಳಿಗಳು ಮುಂದುವರಿದವು.
Comments
Post a Comment