ವಾಚನಾ ಸಪ್ತಾಹಕ್ಕೆ ಚಾಲನೆ
ನಮ್ಮ ಶಾಲೆಯಲ್ಲಿ ತಾರೀಕು 20-06-2016 ರಂದು ಪಿ.ಎನ್ ಪಣಿಕ್ಕರ್ ಇವರ ಚರಮ ದಿನದ ಪ್ರಯುಕ್ತ ನಡೆದ ವಾಚನಾ ಸಪ್ತಾಹಕ್ಕೆ ಶಾಲಾ ನಿವೃತ ಮುಖ್ಯೋಪಾಧ್ಯಾಯರಾದ ಶ್ರೀಧರ್ ರಾವ್. ಆರ್.ಎಮ್ ಚಾಲನೆ ನೀಡಿದರು.
ಅಧ್ಯಾಪಕ ಹರೀಶ್ ಸುಲಾಯ ಕೇರಳದಲ್ಲಿ ಗ್ರಂಥಾಲಯ ಸ್ಥಾಪಿಸುವುದರಲ್ಲಿ ಪಿ.ಎನ್ ಪಣಿಕ್ಕರ್ ಅವರ ಕೆಲಸವನ್ನು ಸ್ಮರಿಸಿದರು. ಅಧ್ಯಾಪಕಿ ನಳಿನಿ ಇವರು ಶಾಲಾ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದರು.ನಂತರ ಮಕ್ಕಳಿಗೆ ಹೊಸದಿಗಂತ ಪತ್ರಿಕೆಯನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಸ್ವಾಗತಿಸಿ, ಮಹಾಬಲೇಶ್ವರ ಭಟ್ ವಂದಿಸಿದರು. ಕಾರ್ಯಕ್ರಮವನ್ನು ಬಾಲಕೃಷ್ಣ. ಎಮ್ ನಿರೂಪಿಸಿದರು.
Comments
Post a Comment