ವಿಶ್ವ ಪರಿಸರ ದಿನ
ನಮ್ಮ ಶಾಲೆಯಲ್ಲಿ ತಾರೀಕು 06-06-2016 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾ ಅಸೆಂಬ್ಲಿಯಲ್ಲಿ ಹಿರಿಯ ಅಧ್ಯಾಪಕರಾದ ನಾರಾಯಣ. ಯು ಮಕ್ಕಳಿಗೆ ಪರಿಸರ ದಿನದ ಮಹತ್ವದ ಕುರಿತು ತಿಳಿಸಿದರು. ನಂತರ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಮಕ್ಕಳಿಗೆ ಪರಿಸರ ದಿನದ ಪ್ರತಿಜ್ಞೆಯನ್ನು ಬೋಧಿಸಿದರು. ನಂತರ ವಿದ್ಯಾರ್ಥಿಗಳಿಗೆ ಸೀತಾಫಲ,ಬೇವು ಮುಂತಾದ ಗಿಡಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ದ್ವಿದಳ ಧಾನ್ಯಗಳು ಮತ್ತು ಗಿಡಗಳ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು.ಮಕ್ಕಳು ಧಾನ್ಯಗಳು ಮತ್ತು ಗಿಡಗಳ ವೈವಿಧ್ಯತೆಯನ್ನು ತಿಳಿದುಕೊಂಡರು. ಎಲ್.ಪಿ ಹಾಗು ಯು.ಪಿ ವಿಭಾಗದ ಎಸ್.ಆರ್.ಜಿ ಕನ್ವಿನರ್ ಈ ಕಾರ್ಯಕ್ರಮವನ್ನು ಸಂಘಟಿಸಿದರು.
Comments
Post a Comment