"ನನ್ನ ಬೆಳೆ ನನ್ನ ಆಹಾರ " "MY CROP MY FOOD" ಯೋಜನೆಗೆ ಚಾಲನೆ
ಈ ಶೈಕ್ಷಣಿಕ ವರ್ಷ 2016-17 ರಲ್ಲಿ ನಮ್ಮ ಶಾಲೆ ಆಯ್ದುಕೊಂಡ ಒಂದು ಹೊಸ ಕಾರ್ಯಕ್ರಮವಾಗಿದೆ "ನನ್ನ ಬೆಳೆ ನನ್ನ ಆಹಾರ" "MY CROP MY FOOD". ಮಕ್ಕಳು ಶಾಲೆಯಲ್ಲಿ ತಮಗಿಷ್ಟವಾದ ಆಹಾರ ಬೆಳೆಯನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಕ್ಕಳು ಜೈವಿಕ ಕೃಷಿಯ ಬಗ್ಗೆ ತಿಳಿಯಲು ಮತ್ತು ಉತ್ತಮ ಆಹಾರ ಬೆಳೆಯನ್ನು ತಾವೇ ಬೆಳೆಸುವ ಸಲುವಾಗಿ ನಮ್ಮ ಶಾಲೆ ಈ ವರ್ಷ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಜನಾರ್ಧನ್ ಮತ್ತು ಎಂ. ಪಿ.ಟಿ.ಎ ಅಧ್ಯಕ್ಷೆಯಾದ ಲಲಿತ ಇವರು ಮಕ್ಕಳಿಗೆ ಬೆಳೆಯನ್ನು ಬೆಳೆಸಲು ಗ್ರೋ ಬ್ಯಾಗ್ಗಳನ್ನು ನೀಡುವುದರ ಮೂಲಕ ಉದ್ಘಾಟಿಸಿದರು.ನಂತರ ಗ್ರೋ ಗ್ರೀನ್ ಕ್ಲಬ್ ನ ಆಶ್ರಯದಲ್ಲಿ ಮಕ್ಕಳಿಗೆ ವೈಜ್ಞಾನಿಕ ರೀತಿಯಲ್ಲಿ ಬೀಜ ಬಿತ್ತುವ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಪ್ರಾತ್ಯಕ್ಷಿಕೆಗೆ ಶಾಲಾ ಅಧ್ಯಾಪಕರಾದ ಮಹಾಬಲೇಶ್ವರ ಭಟ್ ,ಬಾಲಕೃಷ್ಣ. ಎಂ ನೇತೃತ್ವವನ್ನು ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಮಕ್ಕಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
Comments
Post a Comment