ಸ್ವಾತಂತ್ರ್ಯ ದಿನಾಚರಣೆ
ನಮ್ಮ ಶಾಲೆಯಲ್ಲಿ ತಾರೀಕು 15-08-2016ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಶಾಲಾ ಸಂಚಾಲಕಿ ಶ್ರೀಮತಿ ರಾಜೇಶ್ವರಿ.ಎಸ್.ರಾವ್.ಧ್ವಜಾರೋಹಣವನ್ನು ಗೈದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ .ಆರ್ .ಎಮ್ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಅಧ್ಯಾಪಕರಾದ ನಾರಾಯಣ.ಯು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ರಾಜೇಶ್ವರಿ.ಎಸ್.ರಾವ್. ಶಾಲಾ ನಿವೃತ ಮುಖ್ಯೋಪಾಧ್ಯಾಯರಾದ ಜಯರಾಮ .ಡಿ ,ಪಿ.ಟಿ.ಎ ಅಧ್ಯಕ್ಷರಾದ ಥಾಮಸ್ ಡಿ'ಸೋಜಾ , ಎಂ.ಪಿ.ಟಿ.ಎ ಅಧ್ಯಕ್ಷೆ ಸ್ವಪ್ನ.ಪಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಸ್ವಾಗತಿಸಿ ನಳಿನಿ ಟೀಚರ್ ವಂದಿಸಿದರು.ಅಧ್ಯಾಪಕ ಅರವಿಂದಾಕ್ಷ ಭಂಡಾರಿ ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಾಲಕೃಷ್ಣ.ಎಮ್ ನಿರೂಪಿಸಿದರು.
Comments
Post a Comment