ದಿ। ಯಂ. ರಾಮಕೃಷ್ಣರಾವ್ ಸಂಸ್ಮರಣೆ

ನಮ್ಮ ಶಾಲೆಯಲ್ಲಿ ತಾರೀಕು 25-09-2016ನೇ ಆದಿತ್ಯವಾರದಂದು ನಮ್ಮ ಶಾಲಾ ಸಂಚಾಲಕ ದಿ। ಯಂ. ರಾಮಕೃಷ್ಣರಾವ್ ಸಂಸ್ಮರಣೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ನಂದಿಕೇಶನ್.ಎನ್ ವಹಿಸಿದ್ದರು.ಮುಖ್ಯ ಅತಿಥಿಯಾಗಿ S.M.M.A.U.P ಮುಂಡಿತಡ್ಕ ಶಾಲೆಯ ಸಂಚಾಲಕರಾದ ಶ್ರೀ ಜನಾರ್ಧನ ಮಾಸ್ಟರ್ ಆಗಮಿಸಿದ್ದರು.ಪ್ರಾಸ್ತಾವಿಕ ಭಾಷಣದ ಮೂಲಕ ಶಾಲಾ ಆಡಳಿತ ಸಲಹೆಗಾರದ ಶ್ರೀಧರ ರಾವ್ .ಆರ್.ಎಂ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ನಂತರ N.M.P,T High School ಪಣಂಬೂರು  ಇದರ ನಿವೃತ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಕಾರಂತ ಇವರು ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಎಂಬ ವಿಷಯದ ಬಗ್ಗೆ ದಿಕ್ಷೂಚಿ ಭಾಷಣವನ್ನು ಮಾಡಿದರು.ನಂತರ ನಮ್ಮ ಶಾಲಾ ಹಳೆ ವಿದ್ಯಾರ್ಥಿಯಾದ  ಡಾ। ಕೆ.ಎಸ್ ಮೋಹನ ನಾರಾಯಣ (ಪ್ರಾಂಶುಪಾಲರು S.D.M ಕಾಲೇಜು ಉಜಿರೆ) ಇವರನ್ನು ಸನ್ಮಾನಿಸಲಾಯಿತು. ಇದೇ  ಸಂದರ್ಭದಲ್ಲಿ ನಮ್ಮ ಶಾಲಾ ಹಳೆ ವಿದ್ಯಾರ್ಥಿಗಳಾದ ಸಂಜಯ ಬೇಕಲ್ ( ಸ್ವರ್ಣ ಪದಕ ವಿಜೇತ, ಎಂ.ಎ ಸಂಸ್ಕೃತ  )  ಮತ್ತು  ಅಕ್ಷಯ್ ಕುಮಾರ್.ಎ (ಪ್ರಥಮ ರಾಂಕ್,ಇಲೆಕ್ಟ್ರೋನಿಕ್ಸ್ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ) ಇವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ  ಶ್ರೀಮತಿ ರಾಜೇಶ್ವರಿ.ಎಸ್.ರಾವ್,ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಥಾಮಸ್ ಡಿಸೋಜಾ,ಎಂ.ಪಿ.ಟಿ.ಎ ಅಧ್ಯಕ್ಷೆ ಸ್ವಪ್ನ.ಪಿ,ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು.ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕಾರ್ಯಕ್ರಮವನ್ನು ಬಾಲಕೃಷ್ಣ.ಎಂ ನಿರೂಪಿಸಿದರು. 




 

Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU