ಓಣಂ ಹಬ್ಬ ಆಚರಣೆ 09-09-2016
ನಮ್ಮ ಶಾಲೆಯಲ್ಲಿ ತಾರೀಕು 09-09-2016 ನೇ ಶುಕ್ರವಾರ ಓಣಂ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಓಣಂ ಹಬ್ಬದ ಪ್ರಯುಕ್ತ ಪ್ರತೀ ತರಗತಿಗಳಲ್ಲಿ ವಿದ್ಯಾರ್ಥಿಗಳು "ಪೂಕಳಂ"ತಯಾರಿಸಿದರು.ಶಾಲಾ ಸಭಾಂಗಣದಲ್ಲಿ ಅಧ್ಯಾಪಕರಿಂದ "ಪೂಕಳಂ" ಹಾಕಲಾಯಿತು.ಮದ್ಯಾಹ್ನ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷ ಭೋಜನಾ ವ್ಯವಸ್ಥೆಯನ್ನು ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಹಗ್ಗ ಜಗ್ಗಾಟ, ಬಲೂನ್ ಊದುವುದು,ಬಾಲ್ ಪಾಸ್ ಮಾಡುವುದು ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಕೊನೆಗೆ ಶಿಕ್ಷಕರ ಮತ್ತು ಶಿಕ್ಷಕಿಯರ ಹಗ್ಗಜಗ್ಗಾಟ ಸ್ಪರ್ಧೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
Comments
Post a Comment