ಹಸಿರು ಕೇರಳ ಕಾರ್ಯಕ್ರಮ

ನಮ್ಮ ಶಾಲೆಯಲ್ಲಿ ದಿನಾಂಕ 08-12-2016 ಗುರುವಾರದಂದು "ಹಸಿರು ಕೇರಳ" ಕಾರ್ಯಕ್ರಮವನ್ನು ಶಾಲಾ ಆಡಳಿತ ಸಲಹೆಗಾರದ ಶ್ರೀ ಶ್ರೀಧರ್ ರಾವ್ ಉದ್ಘಾಟಿಸಿದರು. ಹಸಿರು ಕೇರಳ ಪ್ರತಿಜ್ಞೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುಧಾಕರ್.ವಿ ವಿದ್ಯಾರ್ಥಿಗಳಿಗೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಉಪಾಧ್ಯಕ್ಷರಾದ ಶ್ರೀ ಜಗನ್ನಾಥ ಹಾಗೂ ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸ್ವಪ್ನ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಸುಧಾಕರ.ವಿ ಸ್ವಾಗತಿಸಿ,ಶ್ರೀ ಅರವಿಂದಾಕ್ಷಾ ಭಂಡಾರಿ ವಂದಿಸಿದರು. ಕಾರ್ಯಕ್ರಮದ ನಂತರ ಪರಿಸರ ಶುಚಿತ್ವ,ನೀರಿನ ಅವಶ್ಯಕತೆ ಹಾಗು ಕೃಷಿಯ ಬಗ್ಗೆ ಅನುಕ್ರಮವಾಗಿ ರಾಧಮಣಿ ಟೀಚರ್, ಶುಭಾ ಟೀಚರ್ ಹಾಗು ಮಹಾಬಲೇಶ್ವರ್ ಭಟ್ ವಿದ್ಯಾಥಿಗಳಿಗೆ ಮಾಹಿತಿಯನ್ನು ನೀಡಿದರು. ನಂತರ ವಿದ್ಯಾರ್ಥಿಗಳು ಹಸಿರು ಕೇರಳ ಕಾರ್ಯಕ್ರಮದ ಅಂಗವಾಗಿ ಘೋಷಣೆಗಳೊಂದಿಗೆ ಆಕರ್ಷಕವಾದ ಮೆರವಣಿಗೆಯನ್ನು ನಡೆಸಿದರು. ನಂತರ ವಿದ್ಯಾರ್ಥಿಗಳು ಶಾಲಾ ವಠಾರ ಹಾಗು ಸುತ್ತುಮುತ್ತಲಿನ ಪರಿಸರವನ್ನು ಶುಚಿಗೊಳಿಸಿದರು. ಮಧ್ಯಾಹ್ನದ ನಂತರ ಕಿರಿಯ ಹಾಗು ಹಿರಿಯ ಪ್ರಾಥಮಿಕ ಮಟ್ಟದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ,ಪ್ರಬಂಧ ಸ್ಪರ್ಧೆ ಹಾಗು ಚಿತ್ರ ರಚನೆ ಸ್ಪರ್ಧೆಗಳನ್ನು ನಡೆಸಲಾಯಿತು.ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.
                              ಇದೇ ಸಂದರ್ಭದಲ್ಲಿ ಪರಿಸರ ನಾಶಕ್ಕೆ ಪ್ರಮುಖ ಕಾರಣವಾಗಿರುವ ಪ್ಲಾಸ್ಟಿಕ್ ವಸ್ತುಗಳಾದ  ಪ್ಲಾಸ್ಟಿಕ್  ಬಾಟಲ್ ಹಾಗು ಉಪಯೋಗ ರಹಿತ ಪ್ಲಾಸ್ಟಿಕ್ ಪೆನ್ನುಗಳನ್ನು ವಿದ್ಯಾರ್ಥಿಗಳಲ್ಲಿ ತರಲು ಹೇಳಿ ಶಾಲೆಯಲ್ಲಿ ರಾಶಿ ಹಾಕಲಾಗಿತ್ತು.ಕೊನೆಗೆ ಇವುಗಳನ್ನು ಮಿಂಜ ಪಂಚಾಯತಿಗೆ ಹಸ್ತಾಂತರಿಸಲಾಯಿತು.





Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU