ಶಾಲಾ ಪ್ರವೇಶೋತ್ಸವ
ಮೀಯಪದವು: ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮೀಯಪದವಿನಲ್ಲಿ 2017-18ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಮೆರವಣಿಗೆಯ ಮೂಲಕ ವಾದ್ಯ ಘೋಷಣೆ ಗಳೊಂದಿಗೆ ಬಹಳ ವಿಜೃಂಬಣೆಯಿಂದ ಜರಗಿತು. ರಾಮಕೃಷ್ಣ ರಾವ್ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಥೋಮಸ್ ಡಿ ಸೋಜಾ ವಹಿಸಿದ್ದರು. ಶಾಲಾ ಆಡಳಿತ ಸಲಹೆಗಾರರಾದ ಶ್ರೀ ಶ್ರೀಧರ ರಾವ್ .ಆರ್.ಎಂ ಪ್ರಾಸ್ತಾವಿಕ ಭಾಷಣ ಗೈದರು. ಶಾಲಾ ಹಳೇ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಚಂದ್ರಶೇಖರ.ಶೆಟ್ಟಿ ಪಳ್ಳತ್ತಡ್ಕ,ಅಧ್ಯಕ್ಷರಾದ ಶ್ರೀ ದಿನೇಶ್ ಅಮ್ಮೆನಡ್ಕ , ಕಾರ್ಯದರ್ಶಿ ಶ್ರೀ ದಾಮೋದರ ಮಾಸ್ಟರ್ ಕಬ್ಬಿನ ಹಿತ್ತಿಲು,ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಸ್ವಪ್ನ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಈ ವರ್ಷ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ನೀಡಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಸ್ವಾಗತಿಸಿ ಶಾಲಾ ಎಸ್.ಆರ್.ಜಿ ಕನ್ವಿನರ್ ಅಶೋಕ್ ಕುಮಾರ್ .ಡಿ ವಂದಿಸಿದರು. ಕಾರ್ಯಕ್ರಮವನ್ನು ಬಾಲಕೃಷ್ಣ.ಎಂ ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಸಿಹಿ ತಿಂಡಿ ವಿತರಿಸಲಾಯಿತು.
Comments
Post a Comment