ವಾಚನಾ ವಾರದ ಉದ್ಘಾಟನೆ
ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿನಲ್ಲಿ ವಾಚನಾ ವಾರದ ಉದ್ಘಾಟನೆಯನ್ನು ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಇವರು ವಿದ್ಯಾರ್ಥಿಗಳಿಗೆ ವಾರ್ತ ಪತ್ರಿಕೆಗಳನ್ನು ನೀಡುವುದರ ಮೂಲಕ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಉದಯವಾಣಿ ವಾರ್ತ ಪತ್ರಿಕೆ ವಿತರಕರು,ಎಂ.ಐ. ಎಂ ಸ್ಟೋರ್ ನ ಮಾಲಿಕರು ಆದ ಚಂದ್ರಶೇಖರ್,ಶಾಲಾ ಎಂ.ಪಿ.ಟಿ. ಎ ಅಧ್ಯಕ್ಷೆ ಸ್ವಪ್ನಾ ಇವರು ಉಪಸ್ಥಿತರಿದ್ದರು.ಶಾಲಾ ಅಧ್ಯಾಪಕರಾದ ನಾರಾಯಣ.ಯು ವಿದ್ಯಾರ್ಥಿಗಳಿಗೆ ಪಿ.ಎನ್ ಪನಿಕ್ಕರ್ ರವರ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಸ್ವಾಗತಿಸಿದರು,ಎಸ್.ಆರ್.ಜಿ ಕನ್ವಿನರ್ ಅಶೋಕ್ ಕುಮಾರ್ ವಂದಿಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕಿ ಸೌಮ್ಯ ಟೀಚರ್ ನಿರೂಪಿಸಿದರು.
Comments
Post a Comment