ಶಾಲಾ ಹಳೆ ವಿದ್ಯಾರ್ಥಿಗಳ ಸಭೆ
ವಿದ್ಯಾವರ್ಧಕ ಶಾಲಾ ಹಳೆ ವಿದ್ಯಾರ್ಥಿಗಳ ಸಭೆಯು ದಿನಾಂಕ 15-07-2017ನೇ ಶನಿವಾರ ಶಾಲೆಯಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರ ಶೇಖರ್ ಶೆಟ್ಟಿ ಪಳ್ಳತ್ತಡ್ಕ ಇವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸುಬ್ಬಣ್ಣ ಭಟ್ ಮದಂಗಲ್ಲು,ವಸಂತ ಭಟ್ ತೊಟ್ಟೆತೋಡಿ,ನಿವೃತ ಎಇಓ ಎಂ.ಜಿ ನಾರಾಯಣ ರಾವ್,ಎಸ್.ವಿ.ವಿ.ಎಚ್.ಎಸ್ ಶಾಲಾ ವ್ಯವಸ್ಥಾಪಕರಾದ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ,ದಿನೇಶ್ ಅಮ್ಮೆನಡ್ಕ,ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ,ನಿವೃತ ಅಧ್ಯಾಪಕಿ ಸರೋಜಾ ಎಸ್ ಉಪಸ್ಥಿತರಿದ್ದರು. ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್.ಎಂ ಇವರು ಪೂರ್ವ ವಿದ್ಯಾರ್ಥಿಗಳ ಸಾರ್ವಜನಿಕ ಶಿಕ್ಷಣ ಯಜ್ಞದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಾಮೋದರ ಮಾಸ್ಟರ್ ಸಂಯೋಜಿಸಿ,ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ವಂದಿಸಿದರು.
Comments
Post a Comment