ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ನಮ್ಮ ಶಾಲೆಯಲ್ಲಿ 2017-18 ನೇ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ತಾರೀಕು ೦೧-೦೭-೨೦೧೭ನೇ ಶನಿವಾರ ಶಾಲಾ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು 2016-17ನೇ ವರ್ಷದ ಪಿ.ಟಿ.ಎ ಅಧ್ಯಕ್ಷರಾದ ಥಾಮಸ್ ಡಿ. ಸೋಜಾ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಆರ್.ಎಂ,ಮುಖ್ಯೋಪಾಧ್ಯಾಯರಾದ ಸುಧಾಕರ.ವಿ,ಎಂ.ಪಿ.ಟಿ.ಎ ಅಧ್ಯಕ್ಷೆ ಸ್ವಪ್ನಾ.ಪಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸುಧಾಕರ್.ವಿ ಸ್ವಾಗತಿಸಿ ಹೆತ್ತವರಿಗೆ ಈ ವರ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಇದೇ ಸಂದರ್ಭದಲ್ಲಿ 2016-17 ನೇ ಸಾಲಿನ ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸ್ಕಾಲರ್ ಶಿಪ್ ಗೆ ಅಹ್ರತೆಯನ್ನು ಪಡೆದುಕೊಂಡ ವಿದ್ಯಾರ್ಥಿಗಳಾದ ಲಿಖಿತ ಎಂ.ಎಸ್,ಜಯಪ್ರದಾ ಹಾಗೂ ಸುಷ್ಮಿತಾ ಇವರಿಗೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.ತಡ ನಂತರ ಈ ವರ್ಷದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ತಿಮ್ಮಪ್ಪ ಭಟ್,ಉಪಾಧ್ಯಕ್ಷರಾಗಿ ನಾರಾಯಣ್ ಉಜಿರೆ,ಎಂ.ಪಿ.ಟಿ.ಎ ಅಧ್ಯಕ್ಷೆಯಾಗಿ ಝೀನತ್,ಉಪಾಧ್ಯಕ್ಷೆಯಾಗಿ ಸೌಮ್ಯ ಇವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕ್ರಮವನ್ನುಅಧ್ಯಾಪಕರಾದ ಹರೀಶ್ ಸುಲಾಯ ನಿರೂಪಿಸಿದರು,ಶಾಲಾ ಸ್ಟಾಫ್ ಸೆಕ್ರೆಟರಿ ರಾಮಚಂದ್ರ. ಕೆ.ಎಂ ವಂದಿಸಿದರು.
Comments
Post a Comment