ಬಾಲ ಸಭೆ ಉದ್ಘಾಟನೆ
ನಮ್ಮ ಶಾಲೆಯಲ್ಲಿ ತಾರೀಕು 31/07/2017 ನೇ ಶುಕ್ರವಾರ ಕಿರಿಯ ಪ್ರಾಥಮಿಕ ವಿಭಾಗದ ಬಾಲಸಭೆಯು ದಿ. ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ರತ್ನಾವತಿ,ಶಾಲಾ ದೈಹಿಕ ಶಿಕ್ಷಕರಾದ ಶ್ರೀ.ಶಿವಸುಬ್ರಹ್ಮಣ್ಯ ಪ್ರಸಾದ್,ಶಾಲಾ ಎಲ್.ಪಿ ಎಸ್.ಆರ್.ಜಿ ಕನ್ವಿನರ್ ವಿಗ್ನೇಶ್.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ಸ್ವಸ್ತಿಕ್ ಸ್ವಾಗತಿಸಿ,ಸಾಕ್ಷಿ ವಂದಿಸಿದರು.ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ನಿಶ್ಮಿತಾ.ಬಿ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.
Comments
Post a Comment