ದಿI ಯಂ.ರಾಮಕೃಷ್ಣ ರಾವ್ ಸಂಸ್ಮರಣಾ ಕಾರ್ಯಕ್ರಮ
ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿನ ವ್ಯವಸ್ಥಾಪಕರಾದ ದಿI ಯಂ.ರಾಮಕೃಷ್ಣ ರಾವ್ ಇವರ 12ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವು ತಾರೀಕು 25-09-2017 ರಂದು ನಮ್ಮ ಶಾಲಾ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಶಾಲಾ ಹಳೆ ವಿದ್ಯಾರ್ಥಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ ವಕೀಲರಾದ ಶ್ರೀ ಉಜಿರೆ ಈಶ್ವರ ಭಟ್ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಹಾಗೂ ಚಾರ್ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಪಿ.ಎಚ್ ಪ್ರಕಾಶ್ ಶೆಟ್ಟಿ ಇವರನ್ನು ಗೌರವಗಳೊಂದಿಗೆ ಸನ್ಮಾನಿಸಲಾಯಿತು.ಇದೆ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ರಾಜ್ಯ ಮಟ್ಟದ ಥ್ರೋ ಬಾಲ್ ಆಟಗಾರ ಶ್ರೀ ಬಸವರಾಜ್ ಎಸ್.ಎಚ್ ಇವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಭಟ್,ಎಂ.ಪಿ.ಟಿ.ಎ ಅಧ್ಯಕ್ಷೆ ಝೀನತ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್.ಆರ್.ಎಂ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಗೈದರು.ಕಾರ್ಯಕ್ರಮವನ್ನು ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ನಿರೂಪಿಸಿ,ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ವಂದಿಸಿದರು.ನಂತರ ಶಾಲಾ ವಿದ್ಯಾರ್ಥಿಗಳಿಂದ ಸೋಮನಾಥ ಮಂಗಲ್ಪಾಡಿ ಹಾಗೂ ಅಧ್ಯಾಪಕ ಹರೀಶ ಸುಲಾಯ ಇವರ ಮಾರ್ಗದರ್ಶನದಲ್ಲಿ ಸುದರ್ಶನ ವಿಜಯ ಕಥಾಭಾಗದ ಯಕ್ಷಗಾನ ನಡೆಯಿತು.
Comments
Post a Comment