ಶ್ರದ್ಧ ಹಾಗೂ ಮಧುರ ಕನ್ನಡ ಸಮಾರೋಪ ಸಮಾರಂಭ ಕಾರ್ಯಕ್ರಮ
ಶ್ರದ್ಧ ಹಾಗೂ ಮಧುರ ಕನ್ನಡ ಸಮಾರೋಪ ಸಮಾರಂಭ ಕಾರ್ಯಕ್ರಮವು ನಮ್ಮ ಶಾಲೆಯಲ್ಲಿ ಜರಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಭಟ್ ಇದರ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಝೀನತ್ ಹಾಗೂ ಶಾಲಾ ಮುಕ್ಯೋಪಾದ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು. ಎಲ್.ಪಿ ವಿಭಾಗದ ಶ್ರದ್ಧ ಹಾಗೂ ಮಧುರ ಕನ್ನಡದ ವರದಿಯನ್ನು ನಮ್ಮ ಶಾಲಾ ಅಧ್ಯಾಪಕರಾದ ವಿಗ್ನೇಶ್.ಎಸ್ ಇವರು ಮಂಡಿಸಿದರು.ಯು.ಪಿ ವಿಭಾಗದ ಶ್ರದ್ಧ ಕಾರ್ಯಕ್ರಮದ ವರದಿಯನ್ನು ಶಾಲಾ ಅಧ್ಯಾಪಕರಾದ ಅಶೋಕ್ ಕುಮಾರ್ ಇವರು ಮಂಡಿಸಿದರು. ಯು.ಪಿ ವಿಭಾಗದ ಮಧುರ ಕನ್ನಡ ವರದಿಯನ್ನು ಶಾಲಾ ಅಧ್ಯಾಪಕಿ ರೇವತಿ ಟೀಚರ್ ಇವರು ಮಂಡಿಸಿದರು. ಈ ಸಂಧರ್ಭದಲ್ಲಿ ಮಧುರ ಕನ್ನಡದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಅಕ್ಷರಗಳನ್ನು ಓದಿಸಲಾಯಿತು.ಕಾರ್ಯಕ್ರಮವನ್ನು ಶ್ರೀಲಕ್ಷ್ಮಿ ಟೀಚರ್ ಸ್ವಾಗತಿಸಿ ರಘುವೀರ್ ರಾವ್ ನಿರೂಪಿಸಿದರು.
Comments
Post a Comment