SCHOOL ANNUAL DAY CELEBRATION

ನಮ್ಮ ಶಾಲಾ ವಾರ್ಷಿಕೋತ್ಸವವನ್ನು ತಾರೀಕು 05-01-2018 ಶುಕ್ರವಾರದಂದು ಧ್ವಜಾರೋಹಣ ಮಾಡುವ ಮೂಲಕ ಶಾಲಾ ಸಂಚಾಲಕಿ ಶ್ರೀಮತಿ ರಾಜೇಶ್ವರಿ ಎಸ್.ರಾವ್ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು. ಸಂಜೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್.ವಿ ವಹಿಸಿದ್ದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾದ  ಶ್ರೀ ಅನಂತ. ಬಿ.ಎಂ ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಶಾಲಾ ನಿವೃತ ಅಧ್ಯಾಪಕರಾದ ಶ್ರೀ ಶಿವರಾಮ ಪದಕಣ್ಣಾಯ ಇವರನ್ನು ಶಾಲಾ ಪರವಾಗಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಭಟ್,ಮಾತೃ ಮಂಡಳಿ ಅಧ್ಯಕ್ಷೆ ಝೀನತ್,ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್.ಎಂ ,ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ನಿರೂಪಿಸಿ,ಅಧ್ಯಾಪಕರಾದ ರಾಮಚಂದ್ರ ಕೆ.ಎಂ ವಂದಿಸಿದರು.ನಂತರ ಶಾಲಾ ಅಧ್ಯಾಪಕರಾದ ಕೃಷ್ಣ ಶರ್ಮ.ಕೆ ನಿರ್ದೇಶಿಸಿದ  "ನಿರಂತರ" ಎಂಬ  ಕನ್ನಡ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.ನಂತರ ಶಾಲಾ ಅಧ್ಯಾಪಕರಿಂದ ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ಇವರ ನಿರ್ದೇಶನದಲ್ಲಿ ಮುರಾಸುರ ವಧೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. 































Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU