ಪರಿಸರ ದಿನಾಚರಣೆ
ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು.ಮಿಂಜಾ ಪಂಚಾಯತ್ ಅಧ್ಯಕ್ಷೆ ಶಂಶಾದ್ ಶುಕೂರ್ ವಿದ್ಯಾರ್ಥಿಗಳಿಗೆ ತರಕಾರಿ ಬೀಜ ಹಾಗೂ ಗಿಡಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮಿಂಜಾ ಪಂಚಾಯತ್ ಕಾರ್ಯದರ್ಶಿ ನಂದಗೋಪಾಲ್ ,ಶಾಲಾ ಆಡಳಿತ ಸಲಹೆಗಾರರದ ಶ್ರೀಧರ್ ರಾವ್ ಆರ್.ಎಂ,ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಹಾಗೂ ಶಾಲಾ ಇಕೋ ಕ್ಲಬ್ ಕನ್ವಿನರ್ ಶಿಹಾಬುದ್ದಿನ್ ಉಪಸ್ಥಿತರಿದ್ದರು.ಶಾಲಾ ಅಧ್ಯಾಪಕರಾದ ಮಹಾಬಲೇಶ್ವರ ಭಟ್ ವಿದ್ಯಾರ್ಥಿಗಳಿಗೆ ಪರಿಸರ ದಿನದ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮವನ್ನು ಮಿಂಜಾ ಕೃಷಿಭವನ ಅಧಿಕಾರಿಯಾದ ರಸಿನ ಸ್ವಾಗತಿಸಿ,ಶಾಲಾ ಅಧ್ಯಾಪಕರಾದ ಬಾಲಕೃಷ್ಣ.ಯಂ ವಂದಿಸಿದರು.ಕಾರ್ಯಕ್ರಮವನ್ನು ಅಧ್ಯಾಪಕ ಹರೀಶ್ ಸುಲಾಯ ನಿರೂಪಿಸಿದರು.
Comments
Post a Comment