ವಿಶ್ವ ಮಾಧಕ ವಿರೋಧಿ ದಿನ
ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ವಿಶ್ವ ಮಾಧಕ ವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು.ಶಾಲಾ ಅಧ್ಯಾಪಕರಾದ ನಾರಾಯಣ.ಯು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ಉಂಟಾಗುವ ಹಾನಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್.ಆರ್.ಎಂ,ಶಾಲಾ ಎಂ.ಪಿ.ಟಿ ಅಧ್ಯಕ್ಷರಾದ ತಿಮ್ಮಪ್ಪ ಭಟ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ್.ವಿ ಉಪಸ್ಥಿತರಿದ್ದರು.ಶಾಲಾ ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ದಿನದ ಪ್ರತಿಜ್ಞೆಯನ್ನು ಬೋಧಿಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ರಾಮಚಂದ್ರ.ಕೆ.ಎಂ ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಂದ ಕುಣಿಕೆ ಎಂಬ ಬೀದಿ ನಾಟಕವು ಮೀಯಪದವು ಪೇಟೆಯಲ್ಲಿ ಜರಗಿತು.ಊರ ಜನರಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕವನ್ನು ನಡೆಸಲಾಯಿತು ಹಾಗೂ ಊರಿನ ಜನರ ಪ್ರಶಂಸೆಗೂ ಪಾತ್ರವಾಯಿತು.ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಿಂಜ ಪಂಚಾಯತ್ ಅಧ್ಯಕ್ಷರಾದ ಶಂಶಾದ್ ಶುಕೂರ್,ಸದಸ್ಯರಾದ ಚಂದ್ರಶೇಖರ್ ಕೋಡಿ, ಮೊಹಮ್ಮದ್ ಕುಂಞ,ಶೋಭಾ ಸೋಮಪ್ಪ,ಶೈಲಜಾ ಬಾಲಕೃಷ್ಣ,ಪಂಚಾಯತ್ ಜೊತೆ ಕಾರ್ಯದರ್ಶಿ ಸುರೇಶ್ಚಂದ್ರನ್ ,ಮಿಂಜಾ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಭಾಕರ ರೈ ಹಾಗೂ ಶಾಲಾ ನಿವೃತ ಅಧ್ಯಾಪಕರಾದ ವಸಂತ ಭಟ್,ಜಗನ್ನಾಥ್ ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ,ವಿಗ್ನೇಷ್.ಎಸ್ ವಂದಿಸಿದರು.ಕಾರ್ಯಕ್ರಮವನ್ನು ಬಾಲಕೃಷ್ಣ.ಎಂ ನಿರೂಪಿಸಿದರು.
Comments
Post a Comment