ಶಾಲಾ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ
ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಶಾಲಾ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ವಿಜ್ಞಾನದ ಪ್ರಯೋಗದ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಸ್ಟಾಫ್ ಸೆಕ್ರೆಟರಿ ಅನುರಾಧ.ಎಂ.ಕೆ , ಶಾಲಾ ಎಲ್.ಪಿ ಹಾಗೂ ಯು.ಪಿ ಎಸ್.ಆರ್.ಜಿ ಕನ್ವಿನರ್ ಶುಭ.ಪಿ ಹಾಗೂ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು.ಶಾಲಾ ವಿವಿಧ ಕ್ಲಬ್ ಗಳ ಕನ್ವಿನರ್ ಗಳಾದ ಹರೀಶ್ ಸುಲಾಯ,ರಾಮಚಂದ್ರ.ಕೆ.ಎಂ,ನಾರಾಯಣ.ಯು, ಅರವಿಂದಾಕ್ಷ ಭಂಡಾರಿ,ಕೃಷ್ಣಶರ್ಮ.ಕೆ ವಿದ್ಯಾರ್ಥಿಗಳಿಗೆ ಕ್ಲಬ್ ಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಕೃಷ್ಣ ಶರ್ಮ ಸ್ವಾಗತಿಸಿ,ರಾಧಮಣಿ ಟೀಚರ್ ವಂದಿಸಿದರು.ಶಾಲಾ ಅಧ್ಯಾಪಕಿ ರೇವತಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಂದ ವಿವಿಧ ಕ್ಲಬ್ ಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವು ರಂಗೇರಿತು
Comments
Post a Comment