ಹಿಂದಿ ದಿನಾಚರಣೆ
ನಮ್ಮ ಶಾಲೆಯಲ್ಲಿ ದಿನಾಂಕ 14-09-2018 ಶುಕ್ರವಾರ ಹಿಂದಿ ದಿನವನ್ನು ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ವಹಿಸಿದ್ದರು. ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್ ಎಂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶಾಲಾ ಎಂ.ಪಿ.ಟಿ. ಎ ಅಧ್ಯಕ್ಷೆ ಸೌಮ್ಯ ಪ್ರಕಾಶ್, ಯು. ಪಿ. ಎಸ್. ಆರ್. ಜಿ. ಕನ್ವಿನರ್ ಮಹಾಬಲೇಶ್ವರ ಭಟ್, ಹಿಂದಿ ಅಧ್ಯಾಪಕರಾದ ರಾಮಚಂದ್ರ.ಕೆ. ಎಂ ಹಾಗೂ ನಳಿನಿ.ಎ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮವನ್ನು ಕುಮಾರಿ ಜಯಪ್ರದಾ ಸ್ವಾಗತಿಸಿ, ಕುಮಾರಿ ಫಾತಿಮತ್ ಶೀಮ ವಂದಿಸಿದರು. ಕಾರ್ಯಕ್ರಮವನ್ನು ಕುಮಾರಿ ಲಿಖಿತ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು.ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಮಾರಿ ಪ್ರಣಮಿ ನಿರೂಪಿಸಿದರು.
Comments
Post a Comment