ವಾಚನ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ
ಮೀಯಪದವು: ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ವಾಚನ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಧಾನ ಅಧ್ಯಾಪಕರಾದ ಸುಧಾಕರ.ವಿ ವಹಿಸಿದ್ದರು.ಅತಿಥಿಗಳಾಗಿ ಎಸ್.ವಿ.ವಿ.ಎಚ್.ಎಸ್.ಶಾಲೆಯ ಕನ್ನಡ ಅಧ್ಯಾಪಕಿ ಸಾವಿತ್ರಿ ಟೀಚರ್ ,ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್.ಎಂ,ಶಾಲಾ ಪಿ.ಟಿ.ಎ ಅಧ್ಯಕ್ಷರಾದ ತಿಮ್ಮಪ್ಪ ಭಟ್,ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಸೌಮ್ಯ ಪ್ರಕಾಶ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ನಂತರ ಮೀಯಪದವಿನ ಎಂ.ಐ. ಎಂ ಸ್ಟೋರ್ ನ ಮಾಲೀಕರಾದ ಚಂದ್ರಶೇಖರ.ಎಂ ಉಚಿತವಾಗಿ ನೀಡಿದ ವಾರ್ತಾಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಿಕೆ ಯೋಗಿತ ಪಿ.ಆರ್ ಸ್ವಾಗತಿಸಿ,ಅಧ್ಯಾಪಕರಾದ ರಾಮಚಂದ್ರ.ಕೆ.ಎಂ ವಂದಿಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಿಕೆ ರಜನಿ.ಸಿ. ಕೆ ನಿರೂಪಿಸಿದರು.
Comments
Post a Comment