ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್.ಎಂ,ಯೋಗ ಗುರುಗಳಾದ ಕುರುಡಪದವು ಶಾಲೆಯ ನಿವೃತ ಅಧ್ಯಾಪಕರಾದ ಕೃಷ್ಣ ಭಟ್ ,ಶಾಲಾ ಪಿ.ಟಿ.ಎ ಅಧ್ಯಕ್ಷರಾದ ತಿಮ್ಮಪ್ಪ ಭಟ್,ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಸೌಮ್ಯ ಪ್ರಕಾಶ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕರಾದ ಸುನಿಲ್ ಕುಮಾರ್ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕರಾದ ಶಿವ ಸುಬ್ರಮಣ್ಯ ಪ್ರಸಾದ್ ವಂದಿಸಿದರು.ನಂತರ ಯೋಗಗುರು ಕೃಷ್ಣ ಭಟ್ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಹೇಳಿ ಕೊಟ್ಟರು.










Comments
Post a Comment