ಬಾಲಸಭೆ ಉದ್ಘಾಟನಾ ಕಾರ್ಯಕ್ರಮ
ವಿದ್ಯಾವರ್ಧಕ ಎ. ಯು. ಪಿ ಶಾಲೆ ಮೀಯಪದವಿನಲ್ಲಿ ಬಾಲಸಭೆ ಉದ್ಘಾಟನಾ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು.ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಕೃಷ್ಣಪ್ರಸಾದ್, ಎಂ.ಪಿ.ಟಿ.ಎ ಅಧ್ಯಕ್ಷೆ ಕೈರುನ್ನಿಸ,ಶಾಲಾ ಹಿರಿಯ ಅಧ್ಯಾಪಿಕೆಯರಾದ ನಳಿನಿ ಟೀಚರ್,ರತ್ನಾವತಿ ಟೀಚರ್, ಶಾಲಾ ಎಸ್.ಆರ್.ಜಿ ಕನ್ವಿನರ್ ಅಫ್ಸತ್.ಸಿ.ಟಿ ಹಾಗೂ ರಘುವೀರ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಜರಗಿದವು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.
Comments
Post a Comment