ಸ್ವಾತಂತ್ರೋತ್ಸವ ದಿನಾಚರಣೆ
ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ಸಂಚಾಲಕಿ ರಾಜೇಶ್ವರಿ.ಎಸ್ ರಾವ್ ಧ್ವಜಾರೋಹಣ ಗೈದರು. ನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ವಹಿಸಿದ್ದರು. ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್.ಆರ್.ಎಂ,ಶಾಲಾ ಮಾಜಿ ಪಿ.ಟಿ.ಎ ಅಧ್ಯಕ್ಷರಾದ ತಿಮ್ಮಪ್ಪ ಭಟ್ ,ಶಾಲಾ ಶಾಲಾ ಸಂಚಾಲಕಿ ರಾಜೇಶ್ವರಿ .ಎಸ್. ರಾವ್ ಹಾಗೂ ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷೆ ಕೈರುನ್ನಿಸ ಸ್ವಾತಂತ್ರೋತ್ಸವದ ಶುಭ ಹಾರೈಸಿದರು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಸ್ವಾಗತಿಸಿ,ಶಾಲಾ ಅಧ್ಯಾಪಕ ಎಸ್.ಎಸ್.ಪ್ರಸಾದ್ ವಂದಿಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕ ಕೃಷ್ಣ ಶರ್ಮ.ಕೆ ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಂದ ಯುದ್ಧ ಎಂಬ ಕಿರುನಾಟಕ ವೇದಿಕೆಯಲ್ಲಿ ಪ್ರದರ್ಶನಗೊಂಡಿತು.
Comments
Post a Comment